ರಾಜ್ಯಮೇ 29ರಂದು ಇಸ್ರೊದಿಂದ NVS-01 ನ್ಯಾವಿಗೇಷನ್ ಉಪಗ್ರಹ ಉಡಾವಣೆ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಇದೇ ಮೇ 29 ರಂದು ಎನ್ವಿಎಸ್-01 ಉಪಗ್ರಹವನ್ನು ಹೊತ್ತೊಯ್ಯುವ ಜಿಯೋಸಿಂಕ್ರೊನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (GSLV) ಮಿಷನ್ ನ್ನು ಉಡಾವಣೆ ಮಾಡಲಿದೆ. NVS-01 ಉಪಗ್ರಹವು NVS ಸರಣಿಯ ಉಪಗ್ರಹಗಳ ಭಾಗವಾಗಿ ನ್ಯಾವಿಗೇಷನ್ ವಿತ್ ಇಂಡಿಯನ್ ಕಾನ್ಸ್ಟೆಲೇಷನ್ (NavIC) ಸೇವೆಗಳ ಅಡಿಯಲ್ಲಿ ಉಡಾವಣೆಯಾಗುವ ಮೊದಲ ಉಪಗ್ರಹವಾಗಿದೆ.