ಕ್ರೀಡೆಡೋಪಿಂಗ್ ಪರೀಕ್ಷೆಯಲ್ಲಿ ಸಿಕ್ಕಿ ಬಿದ್ದ ಕಾಮನ್ವೆಲ್ತ್ ಪದಕ ವಿಜೇತ ಪರ್ದೀಪ್ ಸಿಂಗ್
2018 ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ವಿಜೇತರಾಗಿದ್ದ ರಾಷ್ಟ್ರೀಯ ಚಾಂಪಿಯನ್ ವೇಟ್ಲಿಫ್ಟರ್ ಪರ್ದೀಪ್ ಸಿಂಗ್ ಡೋಪಿಂಗ್ ಪರೀಕ್ಷೆಯಲ್ಲಿ ಸಿಕ್ಕಿ ಬಿದ್ದಿದ್ದಾರೆ. ದೇಶೀ ಕ್ರೀಡಾಕೂಟದಲ್ಲಿ ರೈಲ್ವೆಯನ್ನು ಪ್ರತಿನಿಧಿಸುವ ಪರ್ದೀಪ್ ಸಿಂಗ್ ಅವರ ರಕ್ತದ ಮಾದರಿಯು ಉದ್ದೀಪನಾ ಮದ್ದು ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ.