ರಾಜ್ಯಎಚ್ಎಲ್ಸಿ ಹುದ್ದೆ ನೇಮಕ ವಿಚಾರ: ಕೆಪಿಎಸ್ಸಿ ಅಧಿಕಾರಿಗಳ ನಡುವೆ ಭಿನ್ನಾಭಿಪ್ರಾಯ!
ಕೆಪಿಎಸ್ಸಿ ಕಾನೂನು ಕೋಶದ ಮುಖ್ಯಸ್ಥ (ಎಚ್ಎಲ್ಸಿ) ಹುದ್ದೆಗೆ ನೇಮಕಾತಿಗೆ ಈ ಹಿಂದೆ ಹೊರಡಿಸಿದ್ದ ಅಧಿಸೂಚನೆ ಹಿಂಪಡೆದು, ಕಾರ್ಯದರ್ಶಿ ಹೊಸತಾಗಿ ಅಧಿಸೂಚನೆ ಹೊರಡಿಸಿರುವ ಮೂಲಕ ಕಾರ್ಯದರ್ಶಿ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆಂದು ಆಯೋಗದ ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ್ ಅವರು ಗುರುವಾರ ಆರೋಪಿಸಿದ್ದಾರೆ.