ದೇಶ'ಸ್ಟೇ ಅಟ್ ಹೋಮ್' ಪರಿಣಾಮ: ಅನೇಕ ನಗರಗಳ ವಾಯು ಗುಣಮಟ್ಟ ಸೂಚ್ಯಂಕದಲ್ಲಿ ಮಹತ್ತರ ಪ್ರಗತಿ
ಜನತಾ ಕರ್ಫ್ಯೂ ಮತ್ತು ದೇಶಾದ್ಯಂತ ಲಾಕ್ ಡೌನ್ ಹಿನ್ನೆಲೆಯಲ್ಲಿ ಅತ್ಯಾವಶ್ಯಕವಲ್ಲದ ಕೈಗಾರಿಕಾ ಘಟಕಗಳು ಮುಚ್ಚಿದ್ದು, ಬಹುತೇಕ ವಾಹನಗಳು ರಸ್ತೆಗಿಳಿಯದ ಪರಿಣಾಮ 85 ಪ್ರಮುಖ ನಗರಗಳ ಜನರು ನೆಮ್ಮದಿಯಿಂದ ಉಸಿರಾಡಲು ಸಾಧ್ಯವಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿಯೊಂದರಲ್ಲಿ ತಿಳಿಸಿದೆ.