ದೇಶನವದೆಹಲಿ: ನೇಣು ಬಿಗಿದ ಸ್ಥಿತಿಯಲ್ಲಿ ಎಎಪಿ ಮುಖಂಡ ಸಂದೀಪ್ ಭಾರದ್ವಾಜ್ ಪತ್ತೆ
ಆಮ್ ಆದ್ಮಿ ಪಕ್ಷದ ಮುಖಂಡರೊಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಎಎಪಿ ಟ್ರೇಡ್ ವಿಭಾಗದ ಕಾರ್ಯದರ್ಶಿ ಸಂದೀಪ್ ಭಾರದ್ವಾಜ್ (55) ಪಶ್ಚಿಮ ದೆಹಲಿಯ ರೌಜೌರಿ ಗಾರ್ಡನ್ ನಲ್ಲಿರುವ ತನ್ನ ಮನೆಯಲ್ಲಿನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೂಡಲೇ ಅವರ ಸ್ನೇಹಿತರು ಆಸ್ಪತ್ರೆಯೊಂದಕ್ಕೆ ಸಾಗಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.