ರಾಜ್ಯಬೆಟ್ಟದಿಂದ ಧರೆಗುರುಳಿದ ಬೃಹದಾಕಾರದ ಬಂಡೆ: ಅಂಗನವಾಡಿ, ದೇಗುಲದ ಉಗ್ರಾಣ ಜಖಂ, ತಪ್ಪಿದ ಅನಾಹುತ
ಗ್ರಾಮದ ಸಮೀಪದಲ್ಲಿದ್ದ ಬೆಟ್ಟದಿಂದ ದೊಡ್ಡ ಗಾತ್ರದ ಬಂಡೆಯೊಂದು ಉರುಳಿ ಬಿದ್ದ ಪರಿಣಾಮ ಅಂಗನವಾಡಿ ಕಟ್ಟಡ ಹಾಗೂ ದೇವಾಲಯ ಆವರಣದ ಉಗ್ರಾಣ ಕಟ್ಟಡಕ್ಕೆ ಹಾನಿಯಾಗಿರುವ ಘಟನೆ ಗದಗ ಜಿಲ್ಲೆ ಬೊಮ್ಮೆಸಾಗರದಲ್ಲಿ ನಡೆದಿದೆ. ಘಟನೆಯಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ.