ದೇಶಉನ್ನಾವೋ ಪ್ರಕರಣ: ಅಜ್ಜಿ ಸಮಾಧಿಯ ಪಕ್ಕ ಸಮಾಧಿಯಾದ ಸಂತ್ರಸ್ಥೆ, ಕುಟುಂಬದಿಂದ ಅಂತಿಮ ವಿಧಿವಿಧಾನ ಪೂರ್ಣ
44 ಗಂಟೆಗಳ ಸತತ ಸಾವು-ಬದುಕಿನ ನಡುವೆ ಹೋರಾಟದ ನಂತರ ನವದೆಹಲಿಯ ಸಫ್ದುರ್ಜಂಗ್ ಆಸ್ಪತ್ರೆಯಲ್ಲಿ ಶುಕ್ರವಾರ ತಡರಾತ್ರಿ ನಿಧಳಾದ ಉನ್ನಾವೋ ಅತ್ಯಾಚಾರ ಸಂತ್ರಸ್ಥೆಯ ಮಹಿಳೆಯ ಕುಟುಂಬವು ಅವರ ಅಜ್ಜ-ಅಜ್ಜಿಯ ಸಮಾಧಿಯ ಆಕೆಯ ಸಮಾಧಿ ಮಾಡುವ ಮೂಲಕ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದೆ.ಉನ್ನಾವೋನ ಖೇರಾ ಗ್ರಾಮದ ಕೃಷಿಭೂಮಿಯಲ್ಲಿ ಈ ಅಂತಿಮ ಕ್ರಿಯಾ ವಿಧಾನಗಳು ನಡೆದಿದೆ..