ದೇಶಉದ್ಯೋಗಕ್ಕಾಗಿ ಭೂಹಗರಣ: ಬಿಹಾರದ ಮಾಜಿ ಸಿಎಂ ರಾಬ್ರಿ ದೇವಿ ವಿಚಾರಣೆ ಬೆನ್ನಲ್ಲೇ ಇಂದು ಪತಿ ಲಾಲು ವಿರುದ್ಧ ಸಿಬಿಐ ಗ್ರಿಲ್
ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಅವರ ಪಾಟ್ನಾ ನಿವಾಸದಲ್ಲಿ ಕೇಂದ್ರೀಯ ತನಿಖಾ ದಳ (CBI) ಸುಮಾರು ನಾಲ್ಕು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದು, ಅವರ ಪತಿ ಆರ್ಜೆಡಿ ಮುಖ್ಯಸ್ಥ ಮತ್ತು ಕೇಂದ್ರದ ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಅವರಿಗೆ ಉದ್ಯೋಗಕ್ಕಾಗಿ ಭೂಹಗರಣ ಸಂಬಂಧ ನೋಟಿಸ್ ಜಾರಿ ಮಾಡಿದೆ.