ದೇಶಮಾಲಿಕರು ಟನ್ ಗಟ್ಟಲೆ ಹಣ ಮಾಡ್ತೀವಿ, ಬೇಕಾದರೆ 24 ಗಂಟೆಯೂ ಕೆಲಸ ಮಾಡ್ತೀವಿ, ಸಾಮಾನ್ಯ ಉದ್ಯೋಗಿಯ ಕಥೆ ಏನು?: 70 ಗಂಟೆ ಕೆಲಸದ ಬಗ್ಗೆ ಉದ್ಯಮಿ Namita Thapar
ಹ್ಯೂಮನ್ಸ್ ಆಫ್ ಬಾಂಬೆಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ನಮಿತಾ ಥಾಪರ್, ವಾರಕ್ಕೆ 70 ಗಂಟೆಗಳ ಕಾಲ ಓರ್ವ ಉದ್ಯೋಗಿ ಕೆಲಸ ಮಾಡಬೇಕೆಂದು ನಿರೀಕ್ಷಿಸುವುದು ಆತನ ಮೇಲೆ ಅತಿ ಹೆಚ್ಚು ಒತ್ತಡ ಹೇರಿದಂತಾಗುತ್ತದೆ ಎಂದು ಹೇಳಿದ್ದಾರೆ.