ಇಸ್ರೇಲ್-ಇರಾನ್ ಯುದ್ಧ

ಭಾರತವನ್ನು ದೂರವಿಡಲು ಇದೇ ಕಾರಣ? ಸೋತವರನ್ನು ನನ್ನ ಅಕ್ಕಪಕ್ಕ ಇಟ್ಟುಕೊಳ್ಳಲು ಇಷ್ಟಪಡುತ್ತೇನೆ ಎಂದ ಟ್ರಂಪ್; ಮೂರ್ಖರಾದ್ರಾ ಪಾಕ್?
ಇರಾನ್ ಜೊತೆ ಯುದ್ಧ ಆರಂಭಿಸಿದ ಟ್ರಂಪ್ ಈಗ ಅಡಕತ್ತರಿಗೆ ಸಿಲುಕಿದ್ದಾರೆ. ಅವರು ಮಧ್ಯಪ್ರಾಚ್ಯದಿಂದ ಹಿಂದೆ ಸರಿಯಲು ಬಯಸುತ್ತಾರೆ. ಆದರೆ ಮುಖ ಉಳಿಸಿಕೊಳ್ಳಲು, ಪಾಕಿಸ್ತಾನವನ್ನು ಮಧ್ಯವರ್ತಿಯಾಗಿ ಬಳಸಿಕೊಂಡು ಶಾಂತಿ ಮಾತುಕತೆಯ ನಾಟಕವನ್ನು ಮಾಡುತ್ತಿದ್ದಾರೆ.

West Asia conflict: ಗ್ರಾಹಕರಿಗೆ ಸ್ವಲ್ಪ ನಿರಾಳ; ಪೆಟ್ರೋಲ್-ಡೀಸೆಲ್ ಮೇಲಿನ ಅಬಕಾರಿ ಸುಂಕ ಇಳಿಸಿದ ಕೇಂದ್ರ ಸರ್ಕಾರ
ಈ ಕ್ರಮವು ಜಾಗತಿಕ ಕಚ್ಚಾ ತೈಲದ ಬೆಲೆ ಏರಿಕೆಯಿಂದ ನಷ್ಟ ಅನುಭವಿಸುತ್ತಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಮುಂತಾದ ಸರ್ಕಾರಿ ಇಂಧನ ಕಂಪನಿಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶ ಹೊಂದಿದೆ.

ಪಶ್ಚಿಮ ಏಷ್ಯಾ ಯುದ್ಧ ಇನ್ನಷ್ಟು ಕಾಲ ಮುಂದುವರಿದರೆ ಭಾರತದ ಮೇಲೆ 'ಗಂಭೀರ ಪರಿಣಾಮ': ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ ಇಂದು ರಾಜ್ಯಸಭೆಯಲ್ಲಿ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಮತ್ತು ಭಾರತ ಸೇರಿದಂತೆ ಪ್ರಪಂಚದಾದ್ಯಂತ ಅದು ಸೃಷ್ಟಿಸಿರುವ ಇಂಧನ ಬಿಕ್ಕಟ್ಟಿನ ಕುರಿತು ಮಾತನಾಡಿದರು. ಈ ಯುದ್ಧವು ವಿಶ್ವಾದ್ಯಂತ ಗಂಭೀರ ಇಂಧನ ಬಿಕ್ಕಟ್ಟನ್ನು ಸೃಷ್ಟಿಸಿದೆ.

ಇರಾನ್ ಮತ್ತೊಮ್ಮೆ ಕತಾರ್ ಮೇಲೆ ದಾಳಿ ಮಾಡಿದರೆ, ಸೌತ್ ಪಾರ್ಸ್ ಅನಿಲ ಸ್ಥಾವರ ಮೇಲೆ ಯುದ್ಧ ಖಂಡಿತ: Donald Trump
ಜಾಗತಿಕ ಇಂಧನ ಮಾರುಕಟ್ಟೆಗಳು ಅಸ್ಥಿರವಾಗಿರುವ ಸಂದರ್ಭದಲ್ಲಿ ಮತ್ತು ಇರಾನ್ ಕ್ಷಿಪಣಿಗಳು ಕತಾರ್ ಗೆ ತಾಕಿದ ಹಿನ್ನೆಲೆಯಲ್ಲಿ, ನಿನ್ನೆ ಬುಧವಾರ ರಾತ್ರಿ ಸಾಮಾಜಿಕ ಮಾಧ್ಯಮದಲ್ಲಿ ಟ್ರಂಪ್ ಈ ಬೆದರಿಕೆ ಹಾಕಿದ್ದಾರೆ.

ನನಗೆ ಇರೋದ್ 5 ಬೆರಳು: ಸಾವಿನ ವದಂತಿ ಮಧ್ಯೆ ಚಹಾ ಕುಡಿಯುತ್ತ ಕಾಣಿಸಿಕೊಂಡ ಇಸ್ರೇಲ್ ಪ್ರಧಾನಿ; ಇರಾನ್‌ಗೆ ಮುಖಭಂಗ; Video
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಸಾವಿನ ವದಂತಿಗಳ ನಡುವೆ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ ನೆತನ್ಯಾಹು ರೆಸ್ಟೋರೆಂಟ್‌ನಲ್ಲಿ ಕಾಫಿ ಕುಡಿಯುತ್ತಿರುವುದನ್ನು ಕಾಣಬಹುದು.

ಮಕ್ಕಳ ಸಾವಿಗೆ ಪ್ರತೀಕಾರ: ಇಸ್ರೇಲ್-ಅಮೆರಿಕ, ಗಲ್ಫ್ ದೇಶಗಳ ಮೇಲೆ ದಾಳಿ ನಿಲ್ಲಲ್ಲ; ಇರಾನ್ ಹೊಸ ಸರ್ವೋಚ್ಛ ನಾಯಕ ವಾರ್ನಿಂಗ್!
ಇರಾನ್‌ನ ಹೊಸ ಸರ್ವೋಚ್ಚ ನಾಯಕನಾಗಿ ಅಧಿಕಾರ ವಹಿಸಿಕೊಂಡ ನಂತರ ಜಗತ್ತಿಗೆ ಮೊದಲ ಸಂದೇಶ ರವಾನಿಸಿರುವ ಮೊಜ್ತಬಾ ಖಮೇನಿ, ಅಮೆರಿಕ ಮತ್ತು ಇಸ್ರೇಲ್‌ಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಇತ್ತೀಚಿನ ದಾಳಿಗಳಲ್ಲಿ ಮೃತಪಟ್ಟ ಇರಾನಿಯನ್ನರ ಪ್ರತಿ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುತ್ತವೆ.

Oscar ಕಾರ್ಯಕ್ರಮದ ಮೇಲೆ ಯುದ್ಧದ ಕಾರ್ಮೋಡ: ಇರಾನ್‌ನಿಂದ ಸಂಭವನೀಯ ಡ್ರೋನ್ ದಾಳಿ ಎಚ್ಚರಿಕೆ!
ಯುನೈಟೆಡ್ ಸ್ಟೇಟ್ಸ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಉದ್ವಿಗ್ನತೆ ಕ್ಯಾಲಿಫೋರ್ನಿಯಾದಲ್ಲಿ ಕಂಡುಬರುತ್ತಿದೆ. ಕ್ಯಾಲಿಫೋರ್ನಿಯಾದಲ್ಲಿ ಇರಾನಿನ ಡ್ರೋನ್ ದಾಳಿಯ ಸಂಭವನೀಯತೆಯ ಎಚ್ಚರಿಕೆ ಮುಂಬರುವ 98ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದ ಸುತ್ತಲಿನ ಭದ್ರತಾ ಕಳವಳಗಳನ್ನು ಹುಟ್ಟುಹಾಕಿದೆ.

ಇಸ್ರೇಲ್-ಇರಾನ್ ಯುದ್ಧ: 4 ಸಾವಿರ ಲೀಟರ್ ಡೀಸೆಲ್ ಸಂಗ್ರಹಿಸಿಟ್ಟಿದ್ದ ಮಂಗಳೂರು ಮೂಲದ ವ್ಯಕ್ತಿ ಬಂಧನ
ನಿಖರ ಮಾಹಿತಿಯ ಆಧಾರದಲ್ಲಿ ಬೆಳ್ತಂಗಡಿ ಉಪವಿಭಾಗದ ಡಿವೈಎಸ್‌ಪಿ ರೋಹಿಣಿ ಸಿ.ಕೆ. ಅವರು ಮಾರ್ಚ್ 9ರ ರಾತ್ರಿ ಕಣಿಯೂರು ಗ್ರಾಮದ ಮುಡಲ್ತಿಯಾರ್‌ನಲ್ಲಿ ದಾಳಿ ನಡೆಸಿದರು.

ಇರಾನ್‌ನ ಸರ್ವೋಚ್ಚ ನಾಯಕನಾಗಿ ಆಯ್ಕೆಯಾಗುತ್ತಿದ್ದಂತೆ ಅಲಿ ಖಮೇನಿ ಪುತ್ರ ಮೊಜ್ತಬಾ ಮೇಲೆ ಇಸ್ರೇಲ್ ಭೀಕರ ದಾಳಿ!
ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿಯಲ್ಲಿ ಇರಾನ್ ಸರ್ವೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ ಹತ್ಯೆಯಾಗುತ್ತಿದ್ದಂತೆ ಮಧ್ಯಂತರ ಸರ್ವೋಚ್ಚ ನಾಯಕನನ್ನು ನೇಮಿಸಲಾಗಿತ್ತು. ಆದರೆ ಇಸ್ರೇಲ್ ದಾಳಿ ಮಾಡಿ ಮಧ್ಯಂತರ ಸರ್ವೋಚ್ಚ ನಾಯಕನನ್ನು ಹತ್ಯೆ ಮಾಡಿತ್ತು.

