ದೇಶಮುಂಬೈ ವಿಮಾನ ನಿಲ್ದಾಣದ ಟರ್ಮಿನಲ್ 2 ಸ್ಫೋಟಿಸುವುದಾಗಿ ಬೆದರಿಕೆ ಇಮೇಲ್!
ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ಸ್ಫೋಟಿಸುವುದಾಗಿ ಗುರುವಾರ ಬೆದರಿಕೆ ಇಮೇಲ್ ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇಮೇಲ್ ಕಳುಹಿಸುವವರು ಸ್ಫೋಟವನ್ನು ತಪ್ಪಿಸಲು 48 ಗಂಟೆಗಳ ಒಳಗೆ ಬಿಟ್ಕಾಯಿನ್ನಲ್ಲಿ 1 ಮಿಲಿಯನ್ ಅಮೆರಿಕನ್ ಡಾಲರ್ ಗೆ ಬೇಡಿಕೆ ಇಟ್ಟಿದ್ದಾರೆ.