ಇಡಿ ಜಪ್ತಿ

ಆಮ್ಟೆಕ್ ಗ್ರೂಪ್‌ನ 5,000 ಕೋಟಿ ರೂ. ಮೌಲ್ಯದ ಆಸ್ತಿ ಇಡಿ ಜಪ್ತಿ!
ಜುಲೈನಲ್ಲಿ ಆಮ್ಟೆಕ್ ಗ್ರೂಪ್ ಪ್ರವರ್ತಕ ಅರವಿಂದ್ ಧಾಮ್ ಅವರನ್ನು ಬಂಧಿಸಿದ ನಂತರ ಇಡಿ ಈ ಕ್ರಮ ಕೈಗೊಂಡಿದೆ.

ಕಾಂಗ್ರೆಸ್ ನ ಹೂಡಾ ಭಾಗಿಯಾಗಿರುವ ಭೂ ವಂಚನೆ ಪ್ರಕರಣ: 300 ಕೋಟಿ ರೂ. ಮೌಲ್ಯದ ಭೂಮಿ ED ಜಪ್ತಿ!
ದೆಹಲಿಯ ಗಡಿಯಲ್ಲಿರುವ ಹರಿಯಾಣದ ಗುರುಗ್ರಾಮ್ ಜಿಲ್ಲೆಯ ಹರ್ಸಾರು ತಹಸಿಲ್‌ನ ಬಶಾರಿಯಾ ಗ್ರಾಮದಲ್ಲಿ 88.29 ಎಕರೆ ಭೂಮಿ ಇದೆ. ಈ ಜಮೀನಿನ ಮೌಲ್ಯ 300.11 ಕೋಟಿ ರೂಪಾಯಿ ಎಂದು ಜಾರಿ ನಿರ್ದೇಶನಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಅಕ್ರಮ ಹಣ ವರ್ಗಾವಣೆ: ಇಡಿಯಿಂದ ಮಧುರೈ ಸಂಸ್ಥೆಯ ರೂ. 207 ಕೋಟಿ ಮೌಲ್ಯದ ಆಸ್ತಿ ಜಪ್ತಿ
ಮಧುರೈ ಮೂಲದ ಸಂಸ್ಥೆಯೊಂದು ನಡೆಸಿದ ವಂಚನೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ತಮಿಳುನಾಡಿನಲ್ಲಿರುವ ಅದರ 207 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಗಳನ್ನು ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ ಭಾನುವಾರ ತಿಳಿಸಿದೆ.

ಉದಯನಿಧಿ ಸ್ಟಾಲಿನ್ ಫೌಂಡೇಶನ್‌ನ 36 ಕೋಟಿ ರೂ. ಮೊತ್ತದ ಆಸ್ತಿ, ಬ್ಯಾಂಕ್ ಠೇವಣಿ ಇಡಿಯಿಂದ ಜಪ್ತಿ
ಅಕ್ರಮ ಹಣ ವರ್ಗಾವಣೆ ಕುರಿತ ತನಿಖೆಯ ಭಾಗವಾಗಿ ಉದಯನಿಧಿ ಸ್ಟಾಲಿನ್ ಫೌಂಡೇಶನ್ ಅವರ ಬ್ಯಾಂಕ್ ಖಾತೆಯಲ್ಲಿ ಇರಿಸಲಾಗಿದ್ದ 34.7 ಲಕ್ಷ ರೂ ಹಾಗೂ ತಮಿಳುನಾಡಿನಾದ್ಯಂತ 36 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಸ್ಥಿರಾಸ್ತಿಯನ್ನು ಜಪ್ತಿ ಮಾಡಲಾಗಿದೆ.

