ಇಂಡಿಗೊ ವಿಮಾನ

ಬಾಂಬ್ ಬೆದರಿಕೆ: ಇಂಡಿಗೋ ವಿಮಾನ ಲಕ್ನೋ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ
ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದರು.

IndiGo Crisis | ಒಂದೇ ದಿನ 400 ವಿಮಾನಗಳ ಹಾರಾಟ ರದ್ದು; ಸುಪ್ರೀಂ ಕೋರ್ಟ್ ತಲುಪಿದ ಪ್ರಕರಣ
ಇಂಡಿಗೋ ಶನಿವಾರ ನಾಲ್ಕು ಪ್ರಮುಖ ವಿಮಾನ ನಿಲ್ದಾಣಗಳಿಂದ 400 ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದುಗೊಳಿಸಿದೆ.

ಬಾಂಬ್ ಬೆದರಿಕೆ: ದೆಹಲಿಗೆ ಹೊರಟಿದ್ದ ಇಂಡಿಗೊ ವಿಮಾನ ನಾಗ್ಪುರದಲ್ಲಿ ತುರ್ತು ಲ್ಯಾಂಡಿಂಗ್!
ಮಸ್ಕತ್ ನಿಂದ ಕೊಚ್ಚಿ ಮಾರ್ಗವಾಗಿ ದೆಹಲಿಗೆ ಹೋಗುತ್ತಿದ್ದ ವಿಮಾನದಲ್ಲಿ 157 ಪ್ರಯಾಣಿಕರು ಹಾಗೂ ಆರು ಸಿಬ್ಬಂದಿ ಸಂಚರಿಸುತ್ತಿದ್ದರು.

ಭಾರೀ ಮಳೆ ಮಧ್ಯೆ ಅಪಾಯಕಾರಿ ಸನ್ನಿವೇಶದಲ್ಲಿ ಇಂಡಿಗೊ ವಿಮಾನದಿಂದ ಲ್ಯಾಂಡಿಂಗ್ ಯತ್ನ: Viral video
ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅದರಲ್ಲಿ ಭಾರೀ ಪ್ರಕ್ಷುಬ್ಧ ವಾತಾವರಣ ನಡುವೆ ವಿಮಾನವು ಇಳಿಯಲು ಪ್ರಯತ್ನಿಸುತ್ತಿದೆ. ಹವಾಮಾನ ಪರಿಸ್ಥಿತಿಗಳು ಮತ್ತಷ್ಟು ತೀವ್ರಗೊಳ್ಳುತ್ತಿದ್ದಂತೆ, ವಿಮಾನವು ಲ್ಯಾಂಡಿಂಗ್ ಪ್ರಯತ್ನವನ್ನು ನಿಲ್ಲಿಸಿ ಹಾರಿಹೋಗುತ್ತಿರುವುದು ಕಂಡುಬರುತ್ತದೆ.

ಏರ್ ಇಂಡಿಯಾ ಬಳಿಕ, ಮುಂಬೈನಿಂದ ಹೊರಡುವ ಎರಡು ಇಂಡಿಗೋ ವಿಮಾನಗಳಿಗೆ ಬಾಂಬ್ ಬೆದರಿಕೆ
ಮುಂಬೈನಿಂದ ಮಸ್ಕತ್‌ಗೆ ತೆರಳುವ ಇಂಡಿಗೋ ವಿಮಾನ 6ಇ 1275 ಮತ್ತು ಮುಂಬೈನಿಂದ ಜೆಡ್ಡಾಕ್ಕೆ ಕಾರ್ಯಾಚರಣೆ ನಡೆಸುತ್ತಿರುವ 6E 56 ವಿಮಾನಕ್ಕೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ.

ಬೆಂಗಳೂರು-ಕೋಲ್ಕತ್ತಾ ವಿಮಾನದಲ್ಲಿ ಪ್ರಯಾಣಿಕನಿಗೆ ಹಠಾತ್ ಅನಾರೋಗ್ಯ: ಬದುಕಿಸಿದ ವೈದ್ಯ ದಂಪತಿ!
ನಿಮ್ಹಾನ್ಸ್‌ನಲ್ಲಿ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ಒಂದು ದಿನದ ಹಿಂದೆ ಚಿನ್ನದ ಪದಕವನ್ನು ಪಡೆದ ಡಾ ಎಂ ಎಂ ಸಮೀಮ್ ಮತ್ತು ಅವರ ಪತ್ನಿ ಮಕ್ಕಳ ತಜ್ಞೆ ಡಾ ನಜ್ನಿನ್ ಪರ್ವಿನ್ ಮತ್ತು ಎಂ ಎಸ್ ರಾಮಯ್ಯ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ರಕ್ಷಣಾ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದವರಾಗಿದ್ದಾರೆ.

ದೆಹಲಿಯಿಂದ ವಾರಣಾಸಿಗೆ ಹೊರಟಿದ್ದ IndiGo ವಿಮಾನಕ್ಕೆ ಬಾಂಬ್ ಬೆದರಿಕೆ: ಪ್ರಯಾಣಿಕರ ಸ್ಥಳಾಂತರ, ತೀವ್ರ ತನಿಖೆ
ಬಾಂಬ್ ಕರೆ ಎಲ್ಲಿಂದ ಬಂತು, ಯಾಕೆ ಬಂತು ಎಂಬ ಬಗ್ಗೆ ವಿಮಾನ ನಿಲ್ದಾಣ ಅಧಿಕಾರಿಗಳು ಮತ್ತು ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.

'ನನ್ನ ಸಹ ಪ್ರಯಾಣಿಕ, ಪ್ರತ್ಯಕ್ಷದರ್ಶಿ ಅಣ್ಣಾಮಲೈ ಎಲ್ಲ ಹೇಳಿದ್ದಾರೆ, ಇನ್ನು ನಾನು ಮಾತನಾಡುವ ಅಗತ್ಯವಿಲ್ಲ': ಸಂಸದ ತೇಜಸ್ವಿ ಸೂರ್ಯ
ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಇಂಡಿಗೊ ವಿಮಾನದ ತುರ್ತು ನಿರ್ಗಮನದ ಬಾಗಿಲು ತೆಗೆದಿದದ್ದರು, ಈ ಬಗ್ಗೆ ತನಿಖೆಗೆ ಆದೇಶಿಸಿದಾಗ ಅದು ಸಂಸದ ತೇಜಸ್ವಿ ಸೂರ್ಯ ಎಂದು ತಿಳಿದುಬಂತು ಎಂದು ಸುದ್ದಿಯಾಗಿತ್ತು. ಈ ಘಟನೆ ಬೆಳಕಿಗೆ ಬಂದ ಬಳಿಕ ಸಂಸದ ತೇಜಸ್ವಿ ಸೂರ್ಯ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್ ಆದರು. ಪ್ರತಿಪಕ್ಷ ಕಾಂಗ್ರೆಸ್ ತೇಜಸ್ವಿ

ಬ್ಯಾಗ್ ನಲ್ಲಿ ಬಾಂಬ್ ಇದೆ ಎಂದು ಪ್ರಯಾಣಿಕನಿಂದ ಬೆದರಿಕೆ: ದೆಹಲಿಗೆ ಹೋಗುತ್ತಿದ್ದ ಇಂಡಿಗೊ ವಿಮಾನ ಪಾಟ್ನಾದಲ್ಲಿ ತುರ್ತು ಭೂಸ್ಪರ್ಶ
ತನ್ನ ಬ್ಯಾಗ್‌ನಲ್ಲಿ ಬಾಂಬ್ ಇದೆ ಎಂದು ಪ್ರಯಾಣಿಕರೊಬ್ಬರು ಹೇಳಿಕೊಂಡ ಹಿನ್ನೆಲೆಯಲ್ಲಿ ನಿನ್ನೆ ಅಂದರೆ ಗುರುವಾರ ದೆಹಲಿಗೆ ತೆರಳುತ್ತಿದ್ದ ಇಂಡಿಗೋ ವಿಮಾನ (ಸಂಖ್ಯೆ 6ಇ 2126) ಪಾಟ್ನಾ ವಿಮಾನ ನಿಲ್ದಾಣದಲ್ಲಿ ತುರ್ತು ಭೂ ಸ್ಪರ್ಶ ಮಾಡಿದ ಘಟನೆ ನಡೆದಿದೆ.

