ರಾಜ್ಯಯಾದಗಿರಿ ಜಿಲ್ಲೆಯಿಂದ ಪಾಕಿಸ್ತಾನಕ್ಕೆ ಉಪಗ್ರಹ ದೂರವಾಣಿ ಕರೆ; ಕೇಂದ್ರ ಗುಪ್ತಚರ ಸಂಸ್ಥೆಗಳಿಂದ ಪತ್ತೆ
ಯಾದಗಿರಿ ಜಿಲ್ಲೆಯ ಗ್ರಾಮವೊಂದರಿಂದ ಸ್ಯಾಟಲೈಟ್ ಫೋನ್ ಮೂಲಕ ಪಾಕಿಸ್ತಾನಕ್ಕೆ ಮಾಡಿದ ಕರೆಯನ್ನು ಕೇಂದ್ರ ಗುಪ್ತಚರ ಸಂಸ್ಥೆಗಳು ಪತ್ತೆಹಚ್ಚಿವೆ ಎಂದು ಮೂಲಗಳು ಶುಕ್ರವಾರ ತಿಳಿಸಿವೆ. ಸೆಪ್ಟೆಂಬರ್ 17ರಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಶೆಳ್ಳಗಿ ಗ್ರಾಮದ ಜಮೀನೊಂದರಿಂದ ಕರೆ ಮಾಡಲಾಗಿತ್ತು.