ವಿದೇಶಇಂಗ್ಲೆಂಡ್ ಪ್ರಧಾನಿ ರೇಸ್: ಲಿಜ್ ಟ್ರಸ್ ವಿರುದ್ಧ ಟಿವಿ ಚರ್ಚೆಯಲ್ಲಿ ಗೆದ್ದ ರಿಷಿ ಸುನಕ್, ಪ್ರಧಾನಿ ಹುದ್ದೆಗೇರುವ ಹಾದಿ ಸುಗಮ
ಇಂಗ್ಲೆಂಡಿನಲ್ಲಿ ಪ್ರಧಾನಿ ಗದ್ದುಗೆಯನ್ನು ಯಾರು ಏರುತ್ತಾರೆ ಎಂದು ದಿನದಿಂದ ದಿನಕ್ಕೆ ಕುತೂಹಲ ಹೆಚ್ಚುತ್ತಿದೆ. ಮಾಜಿ ಚಾನ್ಸೆಲರ್ ರಿಷಿ ಸುನಕ್ ಹಾದಿ ಸುಗಮವಾಗುತ್ತಾ ಸಾಗುತ್ತಿದೆ. ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ಸ್ ಅವರೊಂದಿಗೆ ನಡೆಸಿದ ಟೆಲಿವಿಷನ್ ಮುಖಾಮುಖಿ ಸಂವಾದದಲ್ಲಿ ಕನ್ಸರ್ವೇಟಿವ್ ಪಾರ್ಟಿ ಸದಸ್ಯ ರಿಷಿ ಸುನಕ್ ಸುಲಭವಾಗಿ ಮುನ್ನಡೆ ಸಾಧಿಸಿದ್ದಾರೆ.