ರಾಜ್ಯರಾಜ್ಯದ ನಗರಗಳನ್ನು ಸದ್ಯದಲ್ಲಿಯೇ ಸಂಪರ್ಕಿಸಲಿವೆ ಇ-ಬಸ್ ಗಳು
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ತನ್ನ ಮಹತ್ವಾಕಾಂಕ್ಷೆಯ ಅಂತರ ನಗರ ಎಲೆಕ್ಟ್ರಿಕ್ ಬಸ್ ಸೇವೆಯನ್ನು ಡಿಸೆಂಬರ್ ಅಂತ್ಯದೊಳಗೆ ಆರಂಭಿಸಲು ಸಿದ್ಧವಾಗಿದೆ. ಮೊದಲ ಬಸ್ ನ್ನು ಹೈದರಾಬಾದ್ ಮೂಲದ ಎಲೆಕ್ಟ್ರಿಕ್ ಬಸ್ ತಯಾರಕ ಒಲೆಕ್ಟ್ರಾ ಗ್ರೀನ್ಟೆಕ್ ಲಿಮಿಟೆಡ್ ಮುಂದಿನ ವಾರದ ಆರಂಭದಲ್ಲಿ ತಲುಪಿಸುವ ನಿರೀಕ್ಷೆಯಿದೆ.