ದೇಶಭಾರತದಲ್ಲಿ ಇದೇ ಮೊದಲು: ಆ್ಯಂಟಿಜೆನ್ ಆಧಾರಿತ COVID-19 ಪರೀಕ್ಷಾ ಕಿಟ್'ಗೆ ಐಸಿಎಂಆರ್ ಅನುಮೋದನೆ
ಮಹಾಮಾರಿ ಕೊರೋನಾ ವೈರಸ್ ನಡುಕ ಹುಟ್ಟಿಸಿದ್ದು, ವೈರಸ್ ಮಟ್ಟಹಾಕಲು ಅತ್ಯಂತ ಶೀಘ್ರಗತಿಯಲ್ಲಿ ಸೋಂಕನ್ನು ಪತ್ತೆ ಹಚ್ಚುವುದು ಮುಖ್ಯವಾಗಿದೆ. ಈಗಾಗಲೇ ದೇಶದಲ್ಲಿ ವೈರಸ್ ಅತ್ಯಂತ ಶೀಘ್ರಗತಿಯಲ್ಲಿ ಹರಡುತ್ತಿದ್ದು, ಈ ಸಮಯದಲ್ಲಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ವೈದ್ಯಕೀಯ ಅಗತ್ಯತೆ ಹಾಗೂ ಪರೀಕ್ಷೆಗಳ ಸಂಖ್ಯೆ ಹೆಚ್ಚಿಸುವ ಅನಿವಾರ್ಯತೆ ಎದುರಾಗಿದೆ.