ದೇಶವಿಮಾನದಲ್ಲಿ ಪ್ರಯಾಣಿಕರಿಗೆ ನೀಡಿದ ಆಹಾರದಲ್ಲಿ ಕಲ್ಲು ಪತ್ತೆ; ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದ ಏರ್ ಇಂಡಿಯಾ
ಒಂದಿಲ್ಲೊಂದು ವಿಚಾರಗಳಿಗಾಗಿ ಸುದ್ದಿಯಲ್ಲಿರುವ ಏರ್ ಇಂಡಿಯಾ, ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ. ವಿಮಾನದಲ್ಲಿ ತನಗೆ ನೀಡಿದ ಆಹಾರದಲ್ಲಿ ಕಲ್ಲು ಕಂಡುಬಂದಿದೆ ಎಂದು ಪ್ರಯಾಣಿಕರೊಬ್ಬರು ದೂರಿದ ನಂತರ, ವಿಮಾನಯಾನ ಸಂಸ್ಥೆ ಮಂಗಳವಾರ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದೆ ಮತ್ತು ಆಹಾರ ತಯಾರಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದೆ.