ಜೀವನಶೈಲಿಮಕ್ಕಳ ಬೆಳವಣಿಗೆಗೆ ಆಹಾರ ಕ್ರಮ ಅತಿಮುಖ್ಯ: ಜೀವನಶೈಲಿ ಹೇಗಿರಬೇಕು? ಇಲ್ಲಿದೆ ಮಾಹಿತಿ
ಮಕ್ಕಳ ಬೆಳವಣಿಗೆಯಲ್ಲಿ 13-18 ವರ್ಷ ಅತ್ಯಂತ ಮುಖ್ಯವಾದ ಘಟ್ಟವಾಗಿದೆ. ಇದು ಹದಿಹರೆಯದ ವಯಸ್ಸಾಗಿದ್ದು, ಈ ಘಟ್ಟದಲ್ಲಿ ದೈಹಿಕ ಬದಲಾವಣೆ, ಹಾರ್ಮೋನುಗಳ ಏರಿಳಿತಗಳು ಕಂಡು ಬರುತ್ತವೆ. ಈ ಘಟ್ಟದಲ್ಲಿ ಮಕ್ಕಳ ದೇಹ ಆರೋಗ್ಯವಾಗಿರುವುದು ಬಹಳ ಮುಖ್ಯ. ಏಕೆಂದರೆ ಮಕ್ಕಳು ಆರೋಗ್ಯವಾಗಿದ್ದರೆ ಮಾತ್ರ ದೇಹದ ಬೆಳವಣಿಗೆ ಕೂಡ ಉತ್ತಮವಾಗಿರುತ್ತದೆ.