ರಾಜಕೀಯಹಸಿದ ಹೊಟ್ಟೆಗಳಿಗೆ ಜಾತಿ, ಧರ್ಮ, ಊರು ಮುಖ್ಯವೇ?: ಸಿದ್ದರಾಮಯ್ಯ ಪ್ರಶ್ನೆ
ನಗರದ ಕೆಲವು ಬಿಜೆಪಿ ಶಾಸಕರು ಮತ್ತು ಬಿಬಿಎಂಪಿ ಸದಸ್ಯರು ಜಾತಿ-ಧರ್ಮಗಳನ್ನು ವಿಚಾರಿಸಿ ಜನರಿಗೆ ಆಹಾರ ಪೊಟ್ಟಣಗಳನ್ನು ವಿತರಿಸುತ್ತಿರುವ ಬಗ್ಗೆ ದೂರುಗಳು ಬಂದಿವೆ. ಹಸಿದ ಹೊಟ್ಟೆಗಳಿಗೆ ಈ ಸಂದರ್ಭದಲ್ಲಿ ಆಹಾರ ಮುಖ್ಯವೇ ಹೊರತು ಜಾತಿ, ಧರ್ಮ ಊರುಗಳಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.