ಆಸ್ಪತ್ರೆಗಳು

ಆಯುಷ್ಮಾನ್ ಭಾರತ್ ಫಲಾನುಭವಿಗಳಿಂದ ಹಣ ವಸೂಲಿ ಮಾಡಿದರೆ ಕಠಿಣ ಕ್ರಮ: ಸಚಿವ ಯು.ಟಿ ಖಾದರ್ ಎಚ್ಚರಿಕೆ; Video
ಅರ್ಹ ರೋಗಿಗಳಿಂದ ಖಾಸಗಿ ಆಸ್ಪತ್ರೆಗಳು ಹಣ ಪಾವತಿಸುವಂತೆ ಒತ್ತಾಯಿಸಿದರೆ, ಸಂಬಂಧಿತ ಆರೋಗ್ಯ ಮಿತ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಅಪಘಾತಕ್ಕೀಡಾದವರಿಗೆ ತಕ್ಷಣ ಚಿಕಿತ್ಸೆ ನೀಡಿ, ಮುಂಗಡ ಹಣ ಪಾವತಿ ಅಗತ್ಯವಿಲ್ಲ: ಆಸ್ಪತ್ರೆಗಳಿಗೆ ಸೂಚನೆ
ಯಾವುದೇ ಉಲ್ಲಂಘನೆಗೆ ಸೆಕ್ಷನ್ 19(5) ಅಡಿಯಲ್ಲಿ ಒಂದು ಲಕ್ಷ ರೂ.ಗಳವರೆಗೆ ದಂಡ ವಿಧಿಸಲಾಗುತ್ತದೆ

ದೀಪಾವಳಿ ಸಂಭ್ರಮ: ಪಟಾಕಿ ಸಿಡಿತದಿಂದ ಬೆಂಗಳೂರಿನಲ್ಲಿ 40 ಮಂದಿಗೆ ಗಾಯ!
ಶುಕ್ರವಾರ ಮಧ್ಯಾಹ್ನದವರೆಗೂ ಮಿಂಟೋ ಆಸ್ಪತ್ರೆಯಲ್ಲಿ ಆರು ಕಣ್ಣು ಗಾಯದ ಪ್ರಕರಣಗಳು ವರದಿಯಾಗಿವೆ. ಅವರಲ್ಲಿ ಐವರು ಮಕ್ಕಳಾಗಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಾಲ್ಕು ಸುಟ್ಟ ಗಾಯದ ಪ್ರಕರಣಗಳು ವರದಿಯಾಗಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ಡೆಂಗ್ಯೂ ಹೆಚ್ಚಳ: ಆಸ್ಪತ್ರೆಗಳಲ್ಲಿ ಬೆಡ್‌ಗಳನ್ನು ಕಾಯ್ದಿರಿಸುವಂತೆ ಸರ್ಕಾರ ಆದೇಶ
ಈ ಹಿಂದಿನ ಆದೇಶಗಳಿಗೆ ಹೆಚ್ಚುವರಿಯಾಗಿ ಈ ನಿರ್ದೇಶನ ನೀಡಲಾಗಿದೆ. ಮುಂದಿನ ಆದೇಶದವರೆಗೆ ಈ ಆದೇಶ ಜಾರಿಯಲ್ಲಿರುತ್ತದೆ.

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಬಾಂಬ್ ಬೆದರಿಕೆ ಪ್ರಕರಣಗಳು; 4 ತಿಂಗಳಲ್ಲಿ 19 ಎಫ್‌ಐಆರ್ ದಾಖಲು
ನಾಲ್ಕು ತಿಂಗಳ ಅವಧಿಯಲ್ಲಿ ನಗರದ ನೂರಾರು ಶಾಲೆಗಳು ಮತ್ತು ಆಸ್ಪತ್ರೆಗಳಿಗೆ ಬಾಂಬ್ ಬೆದರಿಕೆ ಕರೆಗಳಿಗೆ ಸಂಬಂಧಿಸಿದಂತೆ 19 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಮೇ 13 ಮತ್ತು 14 ರಂದು ಆರು ಆಸ್ಪತ್ರೆಗಳು ಮತ್ತು ಎಂಟು ಶಾಲೆಗಳಿಗೆ ಬೆದರಿಕೆ ಕರೆಗಳು ಬಂದಿವೆ. ಆದಾಗ್ಯೂ, ಯಾವುದೇ ಪ್ರಕರಣಗಳಲ್ಲಿ ಇದುವರೆಗೆ ಯಾವುದೇ ಶಂಕಿತರನ್ನು ಗುರುತಿಸಲಾಗಿಲ್ಲ.

ದೆಹಲಿಯ 8 ಆಸ್ಪತ್ರೆ, ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ
ರಾಷ್ಟ್ರ ರಾಜಧಾನಿಯ 8 ಆಸ್ಪತ್ರೆಗಳು ಹಾಗೂ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭಾನುವಾರ ಬಾಂಬ್ ಬೆದರಿಕೆಯ ಇ-ಮೇಲ್ ಬಂದಿದೆ. ಇತ್ತೀಚಿಗೆ ದೆಹಲಿ ಎನ್ ಸಿಆರ್ ನ 150ಕ್ಕೂ ಹೆಚ್ಚು ಶಾಲೆಗಳಿಗೆ ಇದೇ ರೀತಿಯ ಬಾಂಬ್ ಬೆದರಿಕೆ ಬಂದಿತ್ತು. ಇದಾದ 11 ದಿನಗಳ ನಂತರ ಇದೀಗ ಆಸ್ಪತ್ರೆಗಳು ಹಾಗೂ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಬಂದಿದೆ.

ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳಲ್ಲಿನ ಯುಪಿಐ ವಹಿವಾಟು ಮಿತಿ 5 ಲಕ್ಷ ರೂ. ಗೆ ಏರಿಕೆ
ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ UPI ವಹಿವಾಟುಗಳ ಮಿತಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರತಿ ವಹಿವಾಟಿಗೆ 1 ಲಕ್ಷದಿಂದ 5 ಲಕ್ಷಕ್ಕೆ ಏರಿಸಿದೆ ಎಂದು ತಿಳಿದುಬಂದಿದೆ.

ಹಮಾಸ್ ಉಗ್ರರಿಗೆ ಚಿಕಿತ್ಸೆ ನೀಡದಂತೆ ಆಸ್ಪತ್ರೆಗಳಿಗೆ ಇಸ್ರೇಲ್ ಆದೇಶ
ಹಮಾಸ್ ಉಗ್ರರಿಗೆ ಚಿಕಿತ್ಸೆ ನೀಡುವುದನ್ನು ನಿಲ್ಲಿಸುವಂತೆ ಎಲ್ಲಾ ಸಾರ್ವಜನಿಕ ಆಸ್ಪತ್ರೆಗಳಿಗೆ ಇಸ್ರೇಲ್ ನಿರ್ಗಮಿತ ಆರೋಗ್ಯ ಸಚಿವ ಮೋಶೆ ಅರ್ಬೆಲ್ ಅವರು ಸೂಚನೆ ನೀಡಿದ್ದಾರೆ.

ಕೊಡಗು: ಆಸ್ಪತ್ರೆಗೆ ಎನ್ ಜಿಒಗಳಿಂದ ಸಿಟಿ ಸ್ಕ್ಯಾನ್ ಘಟಕ ಕೊಡುಗೆ
ಕೊಡಗಿನ ಅಮ್ಮಾಟಿಯ ಗ್ರಾಮೀಣ ಭಾರತ ಆರೋಗ್ಯ ಯೋಜನೆ (ಆರ್ ಐಹೆಚ್ ಪಿ) ಆಸ್ಪತ್ರೆಯ ಈಗ ಸಿ.ಟಿ ಸ್ಕ್ಯಾನ್ ಸೌಲಭ್ಯವನ್ನು ಹೊಂದಿದೆ.

