ರಾಜ್ಯತೆರಿಗೆ ಸಂಗ್ರಹ ಹೆಚ್ಚಿಸಲು ಆಸ್ತಿಗಳ ಮರು ಸಮೀಕ್ಷೆ; ನಾಗರಿಕರ ಅನುಕೂಲಕ್ಕಾಗಿ 'ನನ್ನ ಸ್ವತ್ತು' ಕಾರ್ಯಕ್ರಮ: ಡಿ.ಕೆ ಶಿವಕುಮಾರ್
ರಾಜ್ಯ ಸರಕಾರಕ್ಕೆ ಆಸ್ತಿ ತೆರಿಗೆ ದರ ಏರಿಸುವ ಉದ್ದೇಶವಿಲ್ಲ. ಆದರೆ, ನಗರದ ಶೇ. 50 ಜನ ಮಾತ್ರ ತೆರಿಗೆ ಪಾವತಿಸುತ್ತಿದ್ದು, ಉಳಿದವರು ಕಟ್ಟುತ್ತಿಲ್ಲ. ಕೆಲವೆಡೆ ಆಸ್ತಿ ಮಾಲೀಕರು ತಪ್ಪು ಮಾಹಿತಿ ನೀಡಿದ್ದಾರೆ. ಹೀಗಾಗಿ ಮರು ಸಮೀಕ್ಷೆ ಅನಿವಾರ್ಯವಾಗಿದೆ.