ರಾಜ್ಯಮುಸ್ಲಿಂರಲ್ಲಿ ಸ್ಟ್ಯಾಂಪ್ ಆಕ್ಟ್ ಅಡಿಯಲ್ಲಿ ಆಸ್ತಿ ವಿವಾದ ಇತ್ಯರ್ಥಕ್ಕೆ ಅನುಮತಿ: ಹೈಕೋರ್ಟ್
ದೈವಿಕ ಸೂಚನೆಗಳೆಂದು ನಂಬಲಾದ ಷರಿಯತ್ ಕಾನೂನು ಸಮಕಾಲೀನ ಕಾನೂನಿನಡಿಯಲ್ಲಿ ಮಾನ್ಯತೆ ಪಡೆದ ಒಪ್ಪಂದಗಳನ್ನು ಊಹಿಸದೇ ಇರಬಹುದು ಎಂದು ಗಮನಿಸಿದ ರಾಜ್ಯ ಹೈಕೋರ್ಟ್, ಕರ್ನಾಟಕ ಸ್ಟ್ಯಾಂಪ್ ಆಕ್ಟ್ 1957ರ ನಿಬಂಧನೆಗಳ ಅಡಿಯಲ್ಲಿ ವ್ಯಾಖ್ಯಾನಿಸಿದಂತೆ ಒಪ್ಪಂದದ ("settlement) ಮೂಲಕ ಆಸ್ತಿಯನ್ನು ವರ್ಗಾಯಿಸುತ್ತದೆ ಎಂದು ಹೇಳಿದೆ.