ರಾಜಕೀಯವಿಧಾನಮಂಡಲ ಅಧಿವೇಶನ: ಶಾಸಕರೊಂದಿಗೆ ಕುಳಿತುಕೊಳ್ಳಲಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ವೈ!
ಸೆಪ್ಟೆಂಬರ್ 13ರಿಂದ ಹತ್ತು ದಿನಗಳ ಕಾಲ ವಿಧಾನ ಮಂಡಲ ಅಧಿವೇಶನ ನಡೆಸಲು ರಾಜ್ಯ ಸಂಪುಟ ಸಭೆಯಲ್ಲಿ ಗುರುವಾರ ನಿರ್ಧರಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಇದು ಮೊದಲ ಅಧಿವೇಶನವಾದರೆ, ಎಲ್ಲರ ಕಣ್ಣು ಇದೀಗ ಬಿ.ಎಸ್. ಯಡಿಯೂರಪ್ಪ ಅವರತ್ತ ನಟ್ಟಿದೆ.