ದೇಶಕೋವಿಡ್ ಸೋಂಕಿಗೆ ಮತ್ತಷ್ಟು ಬಲಿ: ಸಿಪಿಎಂ ನಾಯಕ ಸೀತಾರಾಮ್ ಯೆಚೂರಿ ಪುತ್ರ ಮತ್ತು ದೆಹಲಿ ಮಾಜಿ ಸಚಿವ ನಿಧನ
ದೇಶದಲ್ಲಿ ಕೊರೋನಾ ವೈರಸ್ ಸೋಂಕು ತಾಂಡವವಾಡುತ್ತಿದೆ, ಅದರಲ್ಲೂ ದೆಹಲಿ, ಮುಂಬೈ, ಬೆಂಗಳೂರಿನಂತಹ ಮಹಾನಗರಗಳಲ್ಲಿ ಸೋಂಕಿನ ತೀವ್ರತೆ ದಟ್ಟವಾಗಿದೆ. ಕೊರೋನಾ ಎರಡನೇ ಅಲೆ ದೇಶದಲ್ಲಿ ಎದ್ದ ಮೇಲೆ ಹಲವರು ಸೋಂಕಿಗೆ ತುತ್ತಾಗಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.ಅವರಲ್ಲಿ ಗಣ್ಯರು ಕೂಡ ಸೇರಿದ್ದಾರೆ.