ಆರೋಗ್ಯ ಕಾರ್ಯಕರ್ತರು

ರಾಜ್ಯದಲ್ಲಿ H3N2 ಅಬ್ಬರ: ಆರೋಗ್ಯ ಕಾರ್ಯಕರ್ತರಿಗೆ ಪಿಪಿಇ, ಫ್ಲೂ ಲಸಿಕೆ ಕಡ್ಡಾಯ, ಆರೋಗ್ಯ ಇಲಾಖೆ ಮಾರ್ಗಸೂಚಿ
ರಾಜ್ಯದ ಅನೇಕ ಭಾಗಗಳಲ್ಲಿ ಇನ್‌ಫ್ಲುಯೆಂಜಾ ಮಾದರಿಯ ಅನೇಕ ಪ್ರಕರಣಗಳು ವರದಿಯಾಗುತ್ತಿದ್ದು, ಹೊಸ ಆತಂಕಕ್ಕೆ ಕಾರಣವಾಗಿದೆ. ದೀರ್ಘಕಾಲದ ಅನಾರೋಗ್ಯ ಮತ್ತು ಬಿಟ್ಟೂಬಿಡದೆ ಕಾಡುವ ಕೆಮ್ಮಿ, ನೆಗಡಿ, ಜ್ವರದಿಂದ ಜನರು ನರಳುತ್ತಿದ್ದಾರೆ...

ಬೆಂಗಳೂರು: ವೇತನ ವಿಳಂಬ; ಪ್ರಾಥಮಿಕ ಆರೋಗ್ಯ ಕೇಂದ್ರಗಳ ಆರೋಗ್ಯ ಕಾರ್ಯಕರ್ತರು ಸಂಕಷ್ಟದಲ್ಲಿ
ವೇತನವನ್ನು ಸಕಾಲಕ್ಕೆ ಪಾವತಿಸುತ್ತಿಲ್ಲ ಎಂದು ನಗರದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕೆಲವು ಆರೋಗ್ಯ ಕಾರ್ಯಕರ್ತರು ದೂರಿದ್ದಾರೆ.

ಕೋವಿಡ್-19: ಆರೋಗ್ಯ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ನೀಡಲು ಸರ್ಕಾರ ಮುಂದು!
ಕೋವಿಡ್ -19 ವಿರುದ್ಧ ಸಂಪೂರ್ಣವಾಗಿ ಲಸಿಕೆ ಪಡೆದವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಸಾವು ಹಾಗೂ ಸೋಂಕು ಇಳಿಕೆಯಾಗಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಇದೀಗ ರಾಜ್ಯ ಸರ್ಕಾರ ಆರೋಗ್ಯ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ನೀಡಲು ಮುಂದಾಗಿದೆ ಎಂದು ತಿಳಿದುಬಂದಿದೆ.

ಕೋವಿಡ್-19 ಲಸಿಕೆ: ಚೆನ್ನಯ್ಯನಕೋಟೆ ಆದಿವಾಸಿಗಳ ಮನವೊಲಿಸುವಲ್ಲಿ ಆರೋಗ್ಯ ಕಾರ್ಯಕರ್ತರು ಯಶಸ್ವಿ
ಚೆನ್ನಯ್ಯನಕೋಟೆಯಲ್ಲಿ ನೆಲೆಯೂರಿರುವ ಆದಿವಾಸಿಗಳ ಸ್ಥಳಕ್ಕೆ ಪ್ರತೀನಿತ್ಯ ಭೇಟಿ ನೀಡುತ್ತಿರುವ ಆರೋಗ್ಯ ಕಾರ್ಯಕರ್ತರು, ಅವರ ಮನವೊಲಿಸಿ ಕೋವಿಡ್ ಲಸಿಕೆ ಕೊಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದರ ಪರಿಣಾಮ ಜಿಲ್ಲೆಯು ಈವರೆಗೂ ಶೇ.95ರಷ್ಟು ಗುರಿ ಸಾಧಿಸಿದಂತಾಗಿದೆ.

ಶೀಘ್ರದಲ್ಲಿಯೇ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್-19 ಮೂರನೇ ಚುಚ್ಚುಮದ್ದು!
ಆರೋಗ್ಯ ಕಾರ್ಯಕರ್ತರಿಗೆ ಬಹು ನಿರೀಕ್ಷಿತ ಕೋವಿಡ್-19 ಮೂರನೇ ಚುಚ್ಚುಮದ್ದಿಗೆ ಮುಂದಿನ ವಾರದೊಳಗೆ ಅನುಮೋದನೆ ದೊರೆಯುವ ಸಾಧ್ಯತೆಯಿದೆ.

ಶೇ.60ಕ್ಕಿಂತಲೂ ಕಡಿಮೆ ಆರೋಗ್ಯ ಕಾರ್ಯಕರ್ತರಿಗೆ ಮಾತ್ರ ಪೂರ್ಣ ಪ್ರಮಾಣದ ಕೋವಿಡ್ ಲಸಿಕೆ: ಕೇಂದ್ರ ಸರ್ಕಾರ ತೀವ್ರ ಕಳವಳ
ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದಿಂದ ತತ್ತರಿಸಿಹೋಗಿರುವ ಭಾರತದಲ್ಲಿ ಶೇ.60ಕ್ಕಿಂತಲೂ ಕಡಿಮೆ ಆರೋಗ್ಯ ಕಾರ್ಯಕರ್ತರಿಗೆ ಮಾತ್ರ ಪೂರ್ಣ ಪ್ರಮಾಣದಲ್ಲಿ ಕೋವಿಡ್ ಲಸಿಕೆ ಹಾಕಲಾಗಿದ್ದು, ಇದು ಕೇಂದ್ರ ಸರ್ಕಾರದ ತೀವ್ರ ಕಳವಳಕ್ಕೆ ಕಾರಣವಾಗಿದೆ.

ಮೈಸೂರು: ಲಸಿಕೆ ಹಾಕಿಸಿಕೊಳ್ಳಿ ಎಂದ ಅಧಿಕಾರಿಗಳಿಗೆ ಗ್ರಾಮಸ್ಥರಿಂದ ಆತ್ಮಹತ್ಯೆ ಬೆದರಿಕೆ!
ಕೊರೋನಾ ಲಸಿಕೆ ಕುರಿತು ರಾಜ್ಯ ಸರ್ಕಾರ ಸಾಕಷ್ಟು ಜಾಗೃತಿಗಳನ್ನು ಮೂಡಿಸುತ್ತಿದ್ದರೂ, ಕೆಲವು ಗ್ರಾಮಗಳಲ್ಲಿ ಆಂತಕ ಇನ್ನೂ ಮುಂದುವರೆದಿದೆ. ಲಸಿಕೆ ಹಾಕಿಸಿಕೊಳ್ಳುವಂತೆ ಬಲವಂತ ಮಾಡಿದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆಂದು ಗುಂಡ್ಲುಪೇಟೆ ತಾಲೂಕಿನ ಶಿವಪುರದ ಗ್ರಾಮಸ್ಥರು ಆಶಾ ಕಾರ್ಯಕರ್ತೆಯರಿಗೆ ಬೆದರಿಕೆ ಹಾಕಿರುವುದು ಇದೀಗ ಬೆಳಕಿಗೆ ಬಂದಿದೆ.

ಕೋವಿಡ್-19 2ನೇ ಅಲೆ: ಆರೋಗ್ಯ ಕಾರ್ಯಕರ್ತರ ಕೆಲಸದಲ್ಲಿ ಅತೀವ ಒತ್ತಡ, ಗುಣಮಟ್ಟದ ಚಿಕಿತ್ಸೆ ಮೇಲೆ ಪರಿಣಾಮ!
ರಾಜ್ಯದಲ್ಲಿ ಮಾರಕ ಕೊರೋನಾ ವೈರಸ್ ನ ಅಲೆ ಅಬ್ಬರಿಸುತ್ತಿದ್ದು, ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಇದೇ ಹೊತ್ತಿನಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಆರೋಗ್ಯ ಕಾರ್ಯಕರ್ತರು ಹೆಚ್ಚುವರಿ ಸಮಯದಲ್ಲಿ ಕೆಲಸ ಮಾಡುತ್ತಿದ್ದು, ಇದು ಅವರಲ್ಲಿ ಅತೀವ ಒತ್ತಡ ಹೆಚ್ಚಾಗುವಂತೆ ಮಾಡುತ್ತಿದೆ.

ಎರಡನೇ ಕೋವಿಡ್ ಅಲೆಗೆ ಏಪ್ರಿಲ್‌ನಲ್ಲಿ ಭಾರತದಾದ್ಯಂತ 34 ವೈದ್ಯರು ಸಾವು: ಐಎಂಎ
ಸಾಂಕ್ರಾಮಿಕ ರೋಗದ ಎರಡನೇ ಅಲೆ ದೇಶವನ್ನು ಅಪ್ಪಳಿಸಿಸಿರುವಂತೇ ಕೊರೋನಾವೈರಸ್ ಸೋಂಕಿನಿಂದಾಗಿ ಏಪ್ರಿಲ್ ತಿಂಗಳಲ್ಲಿ ದೇಶಾದ್ಯಂತ ಈವರೆಗೆ ಕನಿಷ್ಠ 34 ವೈದ್ಯರು ಸಾವನ್ನಪ್ಪಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘ ಸೋಮವಾರ ಬಿಡುಗಡೆ ಮಾಡಿದ ವಿವರಗಳು ತಿಳಿಸಿವೆ.

