ಆಮ್ಲಜನಕ

ಆಸ್ಪತ್ರೆಗಳಲ್ಲಿ ಆಮ್ಲಜನಕ, ಜೀವರಕ್ಷಕ ಸಾಧನಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಿ: ರಾಜ್ಯಗಳಿಗೆ ಕೇಂದ್ರ ಸೂಚನೆ
ಮುಂದೆ ಎದುರಾಗುವ ಯಾವುದೇ ಸವಾಲುಗಳನ್ನು ಎದುರಿಸಲು ಆಸ್ಪತ್ರೆಗಳಲ್ಲಿ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್, ಸಿಲಿಂಡರ್‌ಗಳ ಸಾಕಷ್ಟು ದಾಸ್ತಾನು ಮತ್ತು ವೆಂಟಿಲೇಟರ್‌ಗಳಂತಹ ಕ್ರಿಯಾತ್ಮಕ ಜೀವರಕ್ಷಕ ಸಾಧನಗಳು ಲಭ್ಯವಿರುವಂತೆ ನೋಡಿಕೊಳ್ಳಿ ಎಂದು ಕೇಂದ್ರ ಸರ್ಕಾರ ಶನಿವಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಿಗಳಿಗೆ ಸೂಚಿಸಿದೆ.

ಶ್ರೀಲಂಕಾಗೆ 150 ಟನ್ ಆಮ್ಲಜನಕ ದೇಣಿಗೆ: ಕೊರೊನಾ ಸಂಕಟ ಕಾಲದಲ್ಲಿ ಮಿತ್ರರಾಷ್ಟ್ರಕ್ಕೆ ನೆರವಾದ ಭಾರತ
ಕೊರೊನಾ ಮೂರನೇ ಅಲೆಯಿಂದಾಗಿ ಶ್ರೀಲಂಕಾ ಪರಿಸ್ಥಿತಿ ನಿಯಂತ್ರಣ ಮೀರುತ್ತಿರುವ ಹಿನ್ನೆಲೆಯಲ್ಲಿ ಆಮ್ಲಜನಕ ಕೊರತೆ ಕಂಡುಬಂದಿತ್ತು.

ಕೋವಿಡ್ 2ನೇ ಅಲೆಯಲ್ಲಿ ದೆಹಲಿ ಆಮ್ಲಜನಕದ ಬೇಡಿಕೆಯನ್ನು ಅಗತ್ಯಕ್ಕಿಂತ ಹೆಚ್ಚು ಬಿಂಬಿಸಿರಲಿಲ್ಲ: ಮನೀಶ್ ಸಿಸೋಡಿಯಾ
ಕೊರೋನಾ ಸಾಂಕ್ರಾಮಿಕ ರೋಗದ ಎರಡನೇ ಅಲೆ ಸಂದರ್ಭದಲ್ಲಿ ದೆಹಲಿ ಆಮ್ಲಜನಕವನ್ನು ಅಗತ್ಯಕ್ಕಿಂತ ನಾಲ್ಕು ಪಟ್ಟು ಹೆಚ್ಚು ಬಳಸಿಕೊಂಡಿದೆ ಎಂಬ ಬಗ್ಗೆ ಸುಪ್ರೀಂ ಕೋರ್ಟ್ ನೇಮಿಸಿರುವ ಆಮ್ಲಜನಕ ಲೆಕ್ಕಪರಿಶೋಧನಾ ಸಮಿತಿಯ ವರದಿಯಲ್ಲಿಲ್ಲ ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.

ರಾಜ್ಯದಲ್ಲಿ ಉತ್ಪಾದನೆಯಾಗುವ ಆಮ್ಲಜನಕವನ್ನು ನಾವೇ ಬಳಸಿಕೊಳ್ಳಲು ಕೇಂದ್ರದ ತಾತ್ವಿಕ ಒಪ್ಪಿಗೆ: ಶೆಟ್ಟರ್
ರಾಜ್ಯದಲ್ಲಿ ಉತ್ಪಾದನೆ ಆಗುವ ವೈದ್ಯಕೀಯ ಆಮ್ಲಜನಕವನ್ನು ರಾಜ್ಯದಲ್ಲೇ ಬಳಕೆ ಮಾಡಲು ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ.

ದೆಹಲಿಗೆ ಮೇ 8 ರಂದು 700 ಮೆ.ಟನ್ ಬದಲು ಕೇವಲ 499 ಮೆ.ಟನ್ ಆಮ್ಲಜನಕ: ಎಎಪಿ ಶಾಸಕ ಆರೋಪ
ಸುಪ್ರೀಂ ಕೋರ್ಟ್ ಆದೇಶಿಸಿದಂತೆ ದಿನನಿತ್ಯ ದೆಹಲಿಗೆ ಸರಾಸರಿ 700 ಮೆಟ್ರಿಕ್ ಟನ್ ಆಮ್ಲಜನಕದ ಪೂರೈಕೆಗೆ ಬದಲಾಗಿ ಮೇ 8 ರಂದು ಕೇವಲ 499 ಮೆಟ್ರಿಕ್ ಟನ್ ಆಮ್ಲಜನಕವನ್ನು ಪೂರೈಸಲಾಗಿದೆ ಎಂದು ಎಎಪಿ ಶಾಸಕ ರಾಘವ್ ಚಾಧಾ ಭಾನುವಾರ ತಿಳಿಸಿದ್ದಾರೆ.

ಮಂಗಳೂರು: ಬಹ್ರೇನ್ ನಿಂದ 40 ಟನ್ ಆಮ್ಲಜನಕ ಹೊತ್ತ ಐಎನ್ಎಸ್ ತಲ್ವಾರ್ ಭಾರತಕ್ಕೆ ಆಗಮನ
ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕ 2ನೇಯಲ್ಲಿ ದೇಶಾದ್ಯಂತ ಆಮ್ಲಜನಕದ ಕೊರತೆ ಸಮಸ್ಯೆ ಮುಂದುವರೆದಿರುವಂತೆಯೇ ಇತ್ತ ಭಾರತೀಯ ನೌಕಾಪಡೆಯ ಐಎನ್ಎಸ್ ತಲ್ವಾರ್ ನೌಕೆ ಸುಮಾರು 40 ಟನ್ ಆಮ್ಲಜನಕ ಹೊತ್ತು ಭಾರತಕ್ಕೆ ಮರಳಿದೆ.

ಚಾಮರಾಜನಗರ ದುರಂತದ ನಂತರ ಎಚ್ಚೆತ್ತ ಸರ್ಕಾರ: ಆಮ್ಲಜನಕ ಉತ್ಪಾದಕರ ಜೊತೆ ಸಿಎಂ ಸಭೆ
ಚಾಮರಾಜನಗರ ಆಕ್ಸಿಜನ್ ದುರಂತದ ಬೆನ್ನಲ್ಲೇ ರಾಜ್ಯ ಸರ್ಕಾರ ಕೆಲವೊಂದು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ದುರಂತದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸಿಎಂ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸೋಮವಾರ ಮಹತ್ವದ ಸಭೆ ನಡೆಯಿತು.

ಆಕ್ಸಿಜನ್ ಪೂರೈಕೆ ಕುರಿತು ಬಿಬಿಎಂಪಿ ಆಯುಕ್ತರಿಂದ ನಿತ್ಯ ವರದಿ ಸಲ್ಲಿಕೆ!
ಆಸ್ಪತ್ರೆಗಳಲ್ಲಿ ಸಮಯಕ್ಕೆ ಸರಿಯಾಗಿ ಆಮ್ಲಜನಕವನ್ನು ಪೂರೈಸುವ ಕುರಿತು ದೈನಂದಿನ ವರದಿ ನೀಡುವಂತೆ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯ ಕಾರ್ಯದರ್ಶಿ ಎನ್ ಮಂಜುನಾಥ್ ಪ್ರಸಾದ್ ಅವರು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರಿಗೆ ಸೂಚಿಸಿದ್ದಾರೆ.

ದೆಹಲಿಗೆ 490 ಮೆಟ್ರಿಕ್ ಟನ್ ಆಮ್ಲಜನಕವನ್ನು ಸರಬರಾಜು ಮಾಡಿ ಇಲ್ಲವೆ ನ್ಯಾಯಾಂಗ ನಿಂದನೆ ಎದುರಿಸಿ: ಕೇಂದ್ರಕ್ಕೆ ದೆಹಲಿ ಹೈಕೋರ್ಟ್ ಎಚ್ಚರಿಕೆ
ರಾಷ್ಟ್ರರಾಜಧಾನಿ ದೆಹಲಿಗೆ ಶನಿವಾರವೇ 490 ಮೆಟ್ರಿಕ್ ಟನ್ ಆಮ್ಲಜನಕ ಹಂಚಿಕೆ ಮಾಡಿ ಇಲ್ಲವೇ ನ್ಯಾಯಾಂಗ ನಿಂದನೆಯನ್ನು ಎದುರಿಸಿ ಎಂದು ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

