ರಾಜ್ಯಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು: ಮಳೆಗಾಲದವರೆಗೆ ವರ್ಕ್ ಫ್ರಂ ಹೋಂ, ಆನ್ಲೈನ್ ತರಗತಿಗೆ ನಿವಾಸಿಗಳ ಒತ್ತಾಯ
ಬೆಂಗಳೂರು ನಗರದಲ್ಲಿನ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಮಳೆಗಾಲ ಬರುವವರೆಗೆ ನೀರನ್ನು ಉಳಿಸಲು ವರ್ಕ್ ಫ್ರಂ ಹೋಂ (ಡಬ್ಲ್ಯುಎಫ್ಹೆಚ್) ಮತ್ತು ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿಗಳಿಗೆ ಅವಕಾಶ ನೀಡುವಂತೆ ಬೆಂಗಳೂರು ನಿವಾಸಿಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ.