ರಾಜ್ಯನಕಲಿ ಆಧಾರ್, ವೋಟರ್ ಐಡಿ ಸೃಷ್ಟಿ ಆರೋಪ: ಸಚಿವ ಬೈರತಿ ಸುರೇಶ್ ಅನರ್ಹಕ್ಕೆ ಬಿಜೆಪಿ ಪಟ್ಟು; ಚುನಾವಣಾ ಆಯೋಗಕ್ಕೂ ದೂರು
ನಕಲಿ ಆಧಾರ್, ವೋಟರ್ ಐಡಿ, ಪ್ಯಾನ್ ಕಾರ್ಡ್ ಮತ್ತು ಡ್ರೈವಿಂಗ್ ಲೈಸೆನ್ಸ್ ಸೃಷ್ಟಿಸಿದ ಆರೋಪದ ಮೇಲೆ ಕರ್ನಾಟಕ ನಗರಾಭಿವೃದ್ಧಿ ಸಚಿವ ಮತ್ತು ಹೆಬ್ಬಾಳ ಶಾಸಕ ಸುರೇಶ್ ಬಿ ಎಸ್ (ಬೈರತಿ ಸುರೇಶ್) ಅವರನ್ನು ವಿಧಾನಸಭೆಯಿಂದ ಅನರ್ಹಗೊಳಿಸುವಂತೆ ಬಿಜೆಪಿ ಗುರುವಾರ ಒತ್ತಾಯಿಸಿದೆ.