ವಿದೇಶಪಾಕಿಸ್ತಾನದಲ್ಲಿ ಆತ್ಮಾಹುತಿ ಬಾಂಬ್ ದಾಳಿ; 10 ವರ್ಷದ ಬಾಲಕ ಸಾವು, ಇಬ್ಬರು ಸೈನಿಕರು ಹುತಾತ್ಮ
ಬುಧವಾರ ವಾಯುವ್ಯ ಪಾಕಿಸ್ತಾನದ ಭದ್ರತಾ ಚೆಕ್ಪಾಯಿಂಟ್ ಅನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದು, ಕನಿಷ್ಠ ಇಬ್ಬರು ಸೈನಿಕರು ಮತ್ತು 10 ವರ್ಷದ ಬಾಲಕ ಸಾವಿಗೀಡಾಗಿದ್ದಾರೆ. ಘಟನೆಯಲ್ಲಿ ಇತರ 14 ನಾಗರಿಕರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.