ವಿದೇಶಆಫ್ಘಾನಿಸ್ತಾನದ ಘಜ್ನಿಯಲ್ಲಿ ಕಾರ್ ಬಾಂಬ್ ದಾಳಿ: 27 ಭದ್ರತಾ ಸಿಬ್ಬಂದಿ ಬಲಿ
ಪೂರ್ವ ಆಫ್ಘಾನಿಸ್ತಾನ ನಗರವಾದ ಘಜ್ನಿಯ ಸೇನಾ ನೆಲೆಯಲ್ಲಿ ಕಾರ್ ಬಾಂಬ್ ಸ್ಫೋಟ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 27 ಕ್ಕೆ ಏರಿಕೆಯಾಗಿದ್ದು, 17ಕ್ಕೂ ಹೆಚ್ಚು ಮಂದಿ ಗಾಯಗೊಂಡು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲವನ್ನು ಉಲ್ಲೇಖಿಸಿ ಪಜ್ವೋಕ್ ಆಫ್ಘನ್ ಸುದ್ದಿ ಸಂಸ್ಥೆ ವರದಿ ಮಾಡಿದೆ.