ರಾಜ್ಯಆಕ್ಸಿಜನ್ ಬಿಕ್ಕಟ್ಟು: ಅನುಮತಿ ಪಡೆಯದೆ ಆಸ್ಪತ್ರೆ ಬೆಡ್ ಗಳನ್ನು ಹೆಚ್ಚಿಸದಂತೆ ಮುಖ್ಯ ಕಾರ್ಯದರ್ಶಿ ಸೂಚನೆ
ರಾಜ್ಯದಲ್ಲಿ ಈಗಿರುವ ಬೆಡ್ ಗಳಿಗೆ ಅಗತ್ಯವಿರುವಷ್ಟು ಆಮ್ಲಜನಕ ಮಾತ್ರ ಲಭ್ಯವಿದ್ದು, ಅನುಮತಿ ಪಡೆಯದೇ ಬೆಡ್ ಗಳನ್ನು ಅಥವಾ ಕೋವಿಡ್-19 ರೋಗಿಗಳಿಗೆ ಅಗತ್ಯವಿರುವ ವೈದ್ಯಕೀಯ ಮೂಲಸೌಕರ್ಯವನ್ನು ಹೆಚ್ಚಿಸದಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೂ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಪತ್ರದಲ್ಲಿ ತಿಳಿಸಿದ್ದಾರೆ.