ರಾಜ್ಯವಿಶೇಷ ಆಕ್ಸಿಜನ್ ರೈಲುಗಳ ಕಾರ್ಯಾರಂಭಕ್ಕೆ ರೈಲ್ವೆ ಮಂಡಳಿಗೆ ರಾಜ್ಯ ಸರ್ಕಾರ ಮನವಿ
ರಾಜ್ಯದಲ್ಲಿನ ಕೋವಿಡ್ ಕೇರ್ ಸೆಂಟರ್ ಗಳು ಮತ್ತು ಆಸ್ಪತ್ರೆಗಳಲ್ಲಿನ ಸಮರ್ಪಕ ವೈದ್ಯಕೀಯ ಆಕ್ಸಿಜನ್ ಕೊರತೆ ನಿಭಾಯಿಸಲು ರಾಜ್ಯಕ್ಕೆ ಆಕ್ಸಿಜನ್ ಎಕ್ಸ್ ಪ್ರೆಸ್ ರೈಲುಗಳನ್ನು ಓಡಿಸಲು ಆದ್ಯತೆ ನೀಡಬೇಕೆಂದು ಮುಖ್ಯ ಕಾರ್ಯದರ್ಶಿ ಪಿ. ರವಿ ಕುಮಾರ್ ಶನಿವಾರ ರೈಲ್ವೆ ಮಂಡಳಿಯನ್ನು ಕೇಳಿರುವುದಾಗಿ ರೈಲ್ವೆ ವಲಯದ ಉನ್ನತ ಮೂಲಗಳಿಂದ ತಿಳಿದುಬಂದಿದೆ.