ರಾಜಕೀಯಬೆಣ್ಣೆನಗರಿ ದಾವಣಗೆರೆಯಲ್ಲಿ 'ಸಿದ್ದರಾಮೋತ್ಸವ'ಕ್ಕೆ ಭರ್ಜರಿ ತಯಾರಿ: 6 ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ, 'ಅಹಿಂದ'ನಾಯಕನ ಹುಟ್ಟುಹಬ್ಬ ಸಂಭ್ರಮ ಹೇಗಿದೆ?
ಮಾಜಿ ಮುಖ್ಯಮಂತ್ರಿ 'ಅಹಿಂದ'ನಾಯಕ ಎಂದು ಗುರುತಿಸಿಕೊಂಡಿರುವ ಸಿದ್ದರಾಮಯ್ಯನವರಿಗೆ ಇಂದು ಬುಧವಾರ ಆಗಸ್ಟ್ 3ಕ್ಕೆ 75ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಭಾರೀ ಮಳೆ, ಪ್ರವಾಹ ಭೀತಿಯ ನಡುವೆಯೂ ಅವರ ಅಭಿಮಾನಿಗಳು ಬೆಣ್ಣೆ ನಗರಿ ದಾವಣಗೆರೆಯಲ್ಲಿ ಇಂದು ಸಿದ್ದರಾಮೋತ್ಸವ ಹಮ್ಮಿಕೊಂಡಿದ್ದಾರೆ.