ಅಮ್ಲಜನಕ

ಕೊರೋನಾದಿಂದ ಬಳಲಿರುವ ಶ್ರೀಲಂಕಾಗೆ 35 ಟನ್ ಆಮ್ಲಜನಕ ಪೂರೈಸಲಿರುವ ಭಾರತ
ಕೊರೊನಾ ಹಾವಳಿಯಿಂದ ತತ್ತರಿಸಿರುವ ಶ್ರೀಲಂಕಾದ ಆಸ್ಪತ್ರೆಗಳು ಅಮ್ಲಜನಕ ಕೊರತೆಯನ್ನು ಎದುರಿಸುತ್ತಿದ್ದು, ಭಾರತ 35 ಟನ್ ಆಮ್ಲಜನಕವನ್ನು ಒದಗಿಸಲಿದೆ. ಶ್ರೀಲಂಕಾದಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ ಏಕಾಏಕಿ ಹೆಚ್ಚಳ ಕಂಡ ಪರಿಣಾಮ ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆ ತಲೆದೋರಿತ್ತು.

'ದಯವಿಟ್ಟು ನನ್ನ ಮಗುವನ್ನು ಉಳಿಸಿ': ಆಸ್ಪತ್ರೆ ಆವರಣದಲ್ಲಿ ತಾಯಿಯ ಆಕ್ರಂದನದ ನಡುವೆಯೇ ಪ್ರಾಣ ಬಿಟ್ಟ ಕೋವಿಡ್ ಸೋಂಕಿತ ಮಗು
ಆಂಧ್ರಪ್ರದೇಶದ ವಿಶಾಖಪಟ್ಟಣದ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕು ಪೀಡಿತ ತನ್ನ ಮಗುವಿಗೆ ಚಿಕಿತ್ಸೆ ನೀಡುವಂತೆ ತಾಯಿ ವೈದ್ಯರನ್ನು ಗೋಗರೆಯುತ್ತಿದ್ದ ಬೆನ್ನಲ್ಲೇ ಮಡಿಲಲ್ಲಿದ್ದ ಮಗು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.

