ರಾಜ್ಯನಂದಿನಿ ಜೊತೆ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ: ಅಮೂಲ್ ಮುಖ್ಯಸ್ಥ ಜಯೇನ್ ಮೆಹ್ತಾ
ಕರ್ನಾಟಕದ ಜನಪ್ರಿಯ ಬ್ರ್ಯಾಂಡ್ ನಂದಿನಿ ಜೊತೆಗಿನ ಮಾರುಕಟ್ಟೆ ಕದನ ವಿಚಾರದಲ್ಲಿ ರಾಜಕೀಯ ಗದ್ದಲದಲ್ಲಿ ಸಿಕ್ಕಿಬಿದ್ದಿರುವ ಗುಜರಾತ್ ಮೂಲದ ಸಹಕಾರಿ ಮಾರಾಟ ಅಮೂಲ್ ತನ್ನ ಉತ್ಪನ್ನಗಳನ್ನು ಬೆಂಗಳೂರಿನಲ್ಲಿ ಆನ್ ಲೈನ್ ಮೂಲಕ ಮಾತ್ರ ಮಾರಾಟ ಮಾಡುತ್ತದೆ. ನಂದಿನಿ ಹಾಲಿನ ಜೊತೆಗೆ ಯಾವುದೇ ಸ್ಪರ್ಧೆ ಇಲ್ಲ ಎಂದು ಅದರ ಮುಖ್ಯಸ್ಥರು ಮಂಗಳವಾರ ಹೇಳಿದ್ದಾರೆ.