ರಾಜ್ಯಆಫ್ರಿಕಾ ಖಂಡದ ರಾಷ್ಟ್ರಗಳನ್ನು ಜಿ20ಗೆ ಸೇರಿಸಲು ಪ್ರಧಾನಿ ಪ್ರಸ್ತಾವನೆ, ಸದಸ್ಯ ರಾಷ್ಟ್ರಗಳ ಮೆಚ್ಚುಗೆ: ಅಮಿತಾಭ್ ಕಾಂತ್
ಈ ಭಾರಿ ಜಿ20 ಅಧ್ಯಕ್ಷತೆಯನ್ನು ಭಾರತ ವಹಿಸಿಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಆಫ್ರಿಕಾ ಖಂಡದ ರಾಷ್ಟ್ರಗಳನ್ನು ಜಿ20ಗೆ ಸೇರಿಸಲು ಪ್ರಸ್ತಾಪಿಸಿದರು. ಹಂಪಿಯಲ್ಲಿ ನಡೆದಿರುವ ಮೂರನೇ ಶೆರ್ಪಾ ಸಭೆಯಲ್ಲಿ ಭಾರತದ ಪ್ರಸ್ತಾವನೆಗೆ ಎಲ್ಲಾ ಸದಸ್ಯ ರಾಷ್ಟ್ರಗಳು ಸಂಪೂರ್ಣವಾಗಿ ಬೆಂಬಲ ಸೂಚಿಸಿದವು ಎಂದು ಭಾರತೀಯ ನಿಯೋಗದ ಮುಖ್ಯಸ್ಥ (ಶೆರ್ಪಾ) ಅಮಿತಾಭ್ ಕಾಂತ್ ಹೇಳಿದರು