ದೇಶಅಮರನಾಥ ಯಾತ್ರೆ: ಹೃದಯಾಘಾತದಿಂದ ಯಾತ್ರಾರ್ಥಿ ಸಾವು
ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದ ರಾಂಬನ್ ಜಿಲ್ಲೆಯಲ್ಲಿ ಸೋಮವಾರ ಅಮರನಾಥ ಯಾತ್ರಾರ್ಥಿಯೊಬ್ಬರು ಶಂಕಿತ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತರನ್ನು ಮಧ್ಯಪ್ರದೇಶದ ಗ್ವಾಲಿಯರ್ ನಿವಾಸಿ 59 ವರ್ಷದ ಸತೀಶ್ ಸೂರ್ಯವಂಶಂ ಎಂದು ಗುರುತಿಸಲಾಗಿದೆ.