ಅಭಿಜಿತ್ ಬ್ಯಾನರ್ಜಿ

ವಿತ್ತೀಯ ಕೊರತೆ, ಬಜೆಟ್ ಸಮತೋಲನಕ್ಕಿಂತ ಸರ್ಕಾರ ಹೆಚ್ಚು ಮುಕ್ತ-ಖರ್ಚು ನೀತಿಗಳತ್ತ ಗಮನ ಹರಿಸಲಿ: ಅಭಿಜಿತ್ ಬ್ಯಾನರ್ಜಿ
ವಿತ್ತೀಯ ಕೊರತೆ ಹಾಗೂ ಬಜೆಟ್ ನಡುವೆ ಸಮತೋಲನಕ್ಕೆ ಹೆಚ್ಚು ಕಾಳಜಿ ವಹಿಸುವುದರ ಬದಲು ಯುರೋಪ್ ಹಾಗೂ ಅಮೆರಿಕದ ಮಾದರಿಯಲ್ಲಿ ಮುಕ್ತ-ಖರ್ಚು ನೀತಿಗಳತ್ತ ಭಾರತ ಸರ್ಕಾರ ಹೆಚ್ಚು ಗಮನ ಹರಿಸಬೇಕೆಂದು ಅರ್ಥಶಾಸ್ತ್ರಜ್ಞ ಅಭಿಜಿತ್ ವಿನಾಯಕ್ ಬ್ಯಾನರ್ಜಿ ಅಭಿಪ್ರಾಯಪಟ್ಟಿದ್ದಾರೆ.

ದೇಶದ ಶೇ.60 ರಷ್ಟು ಜನರಿಗೆ ಹಣ, ಎಲ್ಲರಿಗೂ ರೇಷನ್ ಕಾರ್ಡ್ ನೀಡಿ: ಅಭಿಜಿತ್ ಬ್ಯಾನರ್ಜಿ
ಮಹಾಮಾರಿ ಕೊರೋನಾ ವೈರಸ್ ಹಾವಳಿ ಮತ್ತು ಲಾಕ್ ಡೌನ್ ಪರಿಣಾಮದಿಂದ ಎದುರಾಗಿರುವ ಆರ್ಥಿಕ ಸಂಕಷ್ಟ ನಿವಾರಣೆಗಾಗಿ ದೇಶದ ಬಡವರು, ನಿರ್ಗತಿಕರ ಸಹಾಯಕ್ಕಾಗಿ ದೊಡ್ಡ ಆರ್ಥಿಕ ಉತ್ತೇಜನ ಪ್ಯಾಕೇಜ್ ನೀಡುವ ಅಗತ್ಯ ಇದೆ ಎಂದು ನೊಬೆಲ್ ಪುರಸ್ಕೃತ ಭಾರತೀಯ ಮೂಲದ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಅವರು ಪ್ರತಿಪಾದಿಸಿದ್ದಾರೆ.

ನೊಬೆಲ್ ಪ್ರಶಸ್ತಿ ಪ್ರದಾನ: ಭಾರತೀಯ ಸಂಪ್ರದಾಯ ಅನಾವರಣಗೊಳಿಸಿದ ಅಭಿಜಿತ್ ಬ್ಯಾನರ್ಜಿ ದಂಪತಿ..! ನೆಟಿಗರಿಂದ ಪ್ರಶಂಸೆ
ಅರ್ಥಶಾಸ್ತ್ರದಲ್ಲಿ ಈ ಬಾರಿಯ ನೊಬೆಲ್ ಪ್ರಶಸ್ತಿ ವಿಜೇತ ಭಾರತೀಯ ಮೂಲದ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಸ್ಟಾಕ್ ಹೋಂ ನಲ್ಲಿ ಪುರಸ್ಕಾರ ಸ್ವೀಕಾರ ಸಮಾರಂಭದಲ್ಲಿ ಭಾರತೀಯ ಸಂಪ್ರದಾಯವನ್ನ ಅನಾವರಣಗೊಳಿಸಿ ವೈಶಿಷ್ಟ್ಯ ಮೆರೆದರು.

ಭಾರತೀಯ ಶೈಲಿ ಉಡುಪು ಧರಿಸಿ ನೊಬೆಲ್ ಬಹುಮಾನ ಸ್ವೀಕರಿಸಿದ ಅಭಿಷೇಕ್ ಬ್ಯಾನರ್ಜಿ ದಂಪತಿ
ಭಾರತೀಯ-ಅಮೇರಿಕನ್ ಅರ್ಥಶಾಸ್ತ್ರಜ್ಞಅಭಿಜಿತ್ ಬ್ಯಾನರ್ಜಿ ಮತ್ತು ಅವರ ಫ್ರೆಂಚ್-ಅಮೆರಿಕನ್ ಪತ್ನಿ ಎಸ್ತರ್ ಡುಫ್ಲೋ ಇನ್ನೋರ್ವ ಅರ್ಥಶಾಸ್ತ್ರಜ್ಞ ಮೈಕೆಲ್ ಕ್ರೆಮರ್ ಅವರುಗಳಿಗೆ 2019 ರಲ್ಲಿ ಆರ್ಥಿಕ ವಿಜ್ಞಾನದ ನೊಬೆಲ್ ಪ್ರಶಸ್ತಿಯನ್ನು ಮಂಗಳವಾರ ಪ್ರಧಾನ ಮಾಡಲಾಗಿದೆ

ತುರ್ತು ಆರ್ಥಿಕ ಬದಲಾವಣೆಗಳಿಗೆ ನೊಬೆಲ್ ಪುರಸ್ಕೃತ ಅಭಿಜಿತ್ ಬ್ಯಾನರ್ಜಿ ಒತ್ತಾಯ
ಭಾರತದ ಬ್ಯಾಂಕಿಂಗ್ ಬಿಕ್ಕಟ್ಟಿನ ಬಗ್ಗೆ ನೊಬೆಲ್ ಪ್ರಶಸ್ತಿ ಪುರಸ್ಕೃತ ಅಭಿಜಿತ್ ಬ್ಯಾನರ್ಜಿ ಆತಂಕ ವ್ಯಕ್ತಪಡಿಸಿದ್ದು, ಆರ್ಥಿಕ ಕ್ಷೇತ್ರಗಳಲ್ಲಿ ತುರ್ತು ಬದಲಾವಣೆಗಳಿಗೆ ಒತ್ತಾಯಿಸಿದ್ದಾರೆ.

ಪ್ರಧಾನಿ ಮೋದಿ ಭೇಟಿ ಬಳಿಕ ನೊಬೆಲ್ ಪುರಸ್ಕೃತ ಅಭಿಜಿತ್ ಬ್ಯಾನರ್ಜಿ ಹೇಳಿದ್ದಿಷ್ಟು
ಅಚ್ಚರಿಯ ಬೆಳವಣಿಗೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಅಭಿಜಿತ್ ಬ್ಯಾನರ್ಜಿ ಪ್ರಧಾನಿ ಮೋದಿ ತಮ್ಮಲ್ಲಿ ಏನು ಹೇಳಿದರೆಂಬ ಬಗ್ಗೆ ಮಾಹಿತಿ ನೀಡಿದ್ದಾರೆ.

'ಲಕ್ಷಾಂತರ ಭಾರತೀಯರಿಗೆ ನಿಮ್ಮ ಬಗ್ಗೆ ಹೆಮ್ಮೆಯಿದೆ' : ಅಭಿಜಿತ್ ಬ್ಯಾನರ್ಜಿ ಬಗ್ಗೆ ರಾಹುಲ್ ಗಾಂಧಿ ಟ್ವೀಟ್
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೊಬೆಲ್ ಪ್ರಶಸ್ತಿ ವಿಜೇತ ಅಭಿಜಿತ್ ಬ್ಯಾನರ್ಜಿ ಬೆಂಬಲಕ್ಕೆ ನಿಂತಿದ್ದಾರೆ.

ಪಿಯೂಷ್ ಗೋಯಲ್ ನನ್ನ ವೃತ್ತಿಪರತೆ ಪ್ರಶ್ನಿಸುತ್ತಿದ್ದಾರೆ: ನೊಬೆಲ್ ಪುರಸ್ಕೃತ ಅಭಿಜಿತ್ ಬ್ಯಾನರ್ಜಿ
ಬಿಜೆಪಿ ನಾಯಕರು ಮಾಡುತ್ತಿರುವ ವೈಯಕ್ತಿಕ ಟೀಕೆಗಳ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿರುವ ಭಾರತೀಯ ಮೂಲದ ಅಮೆರಿಕ ಅರ್ಥಶಾಸ್ತ್ರಜ್ಞ ಹಾಗೂ 2019ನೇ ಸಾಲಿನ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿ ಪುರಸ್ಕೃತ ಅಭಿಜಿತ್ ಬ್ಯಾನರ್ಜಿ ಅವರು, ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ನನ್ನ ವೃತ್ತಿಪರತೆಯನ್ನು ಪ್ರಶ್ನಿಸುತ್ತಿದ್ದಾರೆ ಎಂದು ಶನಿವಾರ ಹೇಳಿದ್ದಾರೆ.

ನೊಬೆಲ್ ಗಳಿಸಲು .. ವಿದೇಶಿ ಮಹಿಳೆಯನ್ನು 2ನೇ ವಿವಾಹವಾಗಬೇಕು; ಬಿಜೆಪಿ ನಾಯಕನ ಅನುಚಿತ ಹೇಳಿಕೆ
ನೊಬೆಲ್ ಪ್ರಶಸ್ತಿ ಗೆಲ್ಲಬೇಕಾದರೆ, ವಿದೇಶಿ ಮಹಿಳೆಯನ್ನು ಎರಡನೇ ಮದುವೆಯಾಗಬೇಕು. ತಮಗೆ, ಈ ವಿಷಯ ಗೊತ್ತಿರಲಿಲ್ಲ ಎಂದು ಪಶ್ಚಿಮ ಬಂಗಾಳ ರಾಜ್ಯ ಬಿಜೆಪಿ ಅಧ್ಯಕ್ಷ ರಾಹುಲ್ ಸಿನ್ಹಾ ಕೀಳು ಅಭಿರುಚಿಯ ಹೇಳಿಕೆ ನೀಡಿದ್ದಾರೆ.

