ರಾಜಕೀಯ'ನನ್ನನ್ನು ಬಲಿಪಶು ಮಾಡಲಾಯಿತು; ರಿಜ್ವಾನ್ ಅರ್ಷಾದ್, ಸಲೀಂ ಅಹ್ಮದ್ 20 ದಿನಗಳಲ್ಲಿ ಸಾಧಿಸದ್ದನ್ನು ಜಮೀರ್ ಖಾನ್ 2 ಗಂಟೆಗಳಲ್ಲಿ ಮಾಡಿ ತೋರಿಸಿದ್ದಾರೆ': ಅಬ್ದುಲ್ ಜಬ್ಬಾರ್
ರಿಜ್ವಾನ್ ಅರ್ಷಾದ್ ಮತ್ತು ಸಲಿಂ ಅಹ್ಮದ್ ಅವರು ಆಡಿದ ಮಾತುಗಳು ನನಗೆ ತುಂಬಾ ನೋವುಂಟುಮಾಡಿವೆ. ನಾನು ಆ ಸ್ಥಾನಕ್ಕೆ ಅರ್ಹನಲ್ಲ ಎಂದು ಹೇಳಿದ್ದರಿಂದ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಆದರೆ ನಾನು ಪಕ್ಷಕ್ಕೆ ರಾಜೀನಾಮೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.