ರಾಜ್ಯಸಾಕುಪ್ರಾಣಿ ಮಾಲೀಕರ ಜವಾಬ್ದಾರಿಯನ್ನು ನಿಗದಿಪಡಿಸಲು ನಿಯಮಗಳ ಅಗತ್ಯವಿದೆ: ಕರ್ನಾಟಕ ಹೈಕೋರ್ಟ್
ಜನರಿಗೆ ಗಾಯವನ್ನುಂಟುಮಾಡುವುದು ಕೇವಲ ಅಪಾಯಕಾರಿ ತಳಿಯ ಶ್ವಾನಗಳು ಮಾತ್ರವಲ್ಲ, ಯಾವುದೇ ನಾಯಿಯೂ ಉಗ್ರವಾಗಬಹುದು ಎಂಬುದನ್ನು ಗಮನಿಸಿದ ಕರ್ನಾಟಕ ಹೈಕೋರ್ಟ್, ಸಾಕುಪ್ರಾಣಿಗಳ ಮಾಲೀಕರ ಜವಾಬ್ದಾರಿಯನ್ನು ನಿಗದಿಪಡಿಸಲು ಸಂಬಂಧಿತ ನಿಯಮಗಳ ಅಡಿಯಲ್ಲಿ ಕೆಲವು ಮಾರ್ಗಸೂಚಿಗಳನ್ನು ಹೊರಡಿಸುವುದು ಅಗತ್ಯ ಎಂದು ಹೇಳಿದೆ.