ಅನಿರುದ್ಧ್ ಜಟ್ಕರ್

ಅನಿರುದ್ಧ್ ನಟನೆಯ 'ಚೆಫ್ ಚಿದಂಬರ' ಟ್ರೈಲರ್ ಬಿಡುಗಡೆ; ಚಿತ್ರಕ್ಕೆ ಶುಭಕೋರಿದ ನಟ ರಮೇಶ್ ಅರವಿಂದ್
ಅನಿರುದ್ಧ ಜೊತೆಗೆ, ಚಿತ್ರದಲ್ಲಿ ರಾಚೆಲ್ ಡೇವಿಡ್ ಮತ್ತು ನಿಧಿ ಸುಬ್ಬಯ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ ನಟರಾದ ಶರತ್ ಲೋಹಿತಾಶ್ವ, ಶಿವಮಣಿ, ಕೆಎಸ್ ಶ್ರೀಧರ್ ಮತ್ತು ಇತರರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.

'ಚೆಫ್ ಚಿದಂಬರ' ಚಿತ್ರದ ಶೀರ್ಷಿಕೆ ಗೀತೆಗೆ ತಾವೇ ಧ್ವನಿ ನೀಡಿದ ನಟ ಅನಿರುದ್ಧ್ ಜಟ್ಕರ್
ಎಂ ಆನಂದರಾಜ್ ನಿರ್ದೇಶನದ ಚೆಫ್ ಚಿದಂಬರ ಚಿತ್ರದಲ್ಲಿ ನಟ ಅನಿರುದ್ಧ್ ಜಟ್ಕರ್ ನಾಯಕನಾಗಿ ನಟಿಸಿದ್ದು, ಇತ್ತೀಚೆಗಷ್ಟೇ ಚಿತ್ರೀಕರಣ ಪೂರ್ಣಗೊಂಡಿದೆ. ಜೊತೆ ಜೊತೆಯಲಿ ಧಾರಾವಾಹಿಯ ಮೂಲಕ ಖ್ಯಾತಿ ಗಳಿಸಿದ ನಟ ಅನಿರುದ್ಧ್ ಈಗ ಚೆಫ್ ಚಿದಂಬರ ಚಿತ್ರದಲ್ಲಿ ಗಾಯಕರಾಗಿದ್ದಾರೆ. ಚಿತ್ರದ ಶೀರ್ಷಿಕೆ ಗೀತೆಯಾದ 'ಪ್ರತಿ ಬಾರಿ ಮಿತಿ ಮೀರಿ' ಹಾಡಿಗೆ ಧ್ವನಿ ನೀಡಿದ್ದಾರೆ.

ಚೆಫ್ ಚಿದಂಬರನಾಗಿ ಅನಿರುದ್ಧ್ ಜಟ್ಕರ್: ಶೀರ್ಷಿಕೆ ಬಿಡುಗಡೆ ಮಾಡಿದ ಸುದೀಪ್
ಜೊತೆ ಜೊತೆಯಲಿ' ಧಾರಾವಾಹಿ ಮೂಲಕ ಖ್ಯಾತಿ ಪಡೆದ ನಟ ಅನಿರುದ್ಧ ಅವರು ಈಗ ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಶೀರ್ಷಿಕೆ ಅನಾವರಣವಾಗಿದೆ. ಚಿತ್ರಕ್ಕೆ 'chef ಚಿದಂಬರ' ಎಂದು ಹೆಸರಿಡಲಾಗಿದೆ. ಇತ್ತೀಚೆಗೆ ಈ ಸಿನಿಮಾದ ಶೀರ್ಷಿಕೆಯನ್ನು ನಟ ಕಿಚ್ಚ ಸುದೀಪ್ ಬಿಡುಗಡೆ ಮಾಡಿ, ಚಿತ್ರಕ್ಕೆ ಶುಭ ಕೋರಿದರು.

ಆನಂದ್ ರಾಜ್ ನಿರ್ದೇಶನದ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಅನಿರುದ್ಧ್ ಜಟ್ಕರ್ ಪುನರಾಗಮನ
ಜೊತೆ ಜೊತೆಯಲಿ ಮತ್ತು ಸೂರ್ಯವಂಶದಂತಹ ಧಾರಾವಾಹಿಗಳಲ್ಲಿನ ಅಭಿನಯದಿಂದ ಖ್ಯಾತಿ ಗಳಿಸಿದ ನಟ ಅನಿರುದ್ಧ್ ಜಟ್ಕರ್, ಐದು ವರ್ಷಗಳ ನಂತರ ನಿರ್ದೇಶಕ ಆನಂದ್ ರಾಜ್ ಅವರ ಸಿನಿಮಾದಲ್ಲಿ ಮುಖ್ಯ ಪಾತ್ರದ ಮೂಲಕ ಚಿತ್ರರಂಗಕ್ಕೆ ಮರಳುತ್ತಿದ್ದಾರೆ.

