ದೇಶಉಗ್ರರೊಂದಿಗಿನ ಕಾಳಗದಲ್ಲಿ ಝೂಮ್ ಹುತಾತ್ಮ: ಸಕಲ ಗೌರವದೊಂದಿಗೆ ಸೇನಾ ಶ್ವಾನಕ್ಕೆ ಅಂತಿಮ ನಮನ
ಈ ವಾರದ ಆರಂಭದಲ್ಲಿ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ನಡೆದ ಉಗ್ರರೊಂದಿಗಿನ ಎನ್ಕೌಂಟರ್ನಲ್ಲಿ ಗುಂಡೇಟಿನಿಂದ ಗಾಯಗೊಂಡು ಗುರುವಾರ ಸಾವನ್ನಪ್ಪಿದ ತನ್ನ ಭಾರತೀಯ ಸೇನಾಪಡೆಯ ಶ್ವಾನದಳದ ಯೋಧ 'ಜೂಮ್'ಗೆ ಶುಕ್ರವಾರ ಸೇನೆಯು ಗೌರವಾನ್ವಿತ ಅಂತಿಮ ಗೌರವ ಸಲ್ಲಿಸಿತು.