ಸಿನಿಮಾ ಸುದ್ದಿಕನ್ನಡ ಚಿತ್ರರಂಗಕ್ಕೆ ಹಿಂದಿಯ ಖ್ಯಾತ ನಟ ಅಧ್ಯಯನ್ ಸುಮನ್ ಪದಾರ್ಪಣೆ, ಜೋಡಿಯಾಗಿ ರಾಗಿಣಿ ದ್ವಿವೇದಿ!
ಆರ್ಯನ್ ಅವರ ಚೊಚ್ಚಲ ನಿರ್ದೇಶನದ ಸಿನಿಮಾ ಮೂಲಕ ಅಧ್ಯಯನ್ ಸುಮನ್ ದಕ್ಷಿಣ ಭಾರತದ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ. ರಾಝ್- ದಿ ಮಿಸ್ಟರಿ ಕಂಟಿನ್ಯೂಸ್ ಮತ್ತು ಆಶ್ರಮ್ ವೆಬ್ ಸರಣಿ, ಹಾಗೆಯೇ ಮ್ಯೂಸಿಕಲ್ ವಿಡಿಯೋಗಳಿಗೆ ಹೆಸರುವಾಸಿಯಾದ ಹಿಂದಿ ನಟ, ಇದೀಗ ಥ್ರಿಲ್ಲಿಂಗ್ ಬಹುಭಾಷಾ ಕ್ರೈಮ್ ಸಿನಿಮಾದಲ್ಲಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.