ಸಂಚಯಮಂಗನ ಕೈಯಲ್ಲಿನ ಮಾಣಿಕ್ಯವೂ, ನನ್ನ ಕೈಲಿ ಸ್ಯಾಮ್ಸಂಗ್ ಮೊಬೈಲೂ: ಬೇಸ್ತು ಬಿದ್ದ ಪ್ರಹಸನ
"ಕೆಲಸಕ್ಕೆ ಲ್ಯಾಪ್ಟಾಪ್ ಹೊತ್ತುಕೊಂಡು ಯಾಕೆ ಹೋಗ್ತೀಯ ಅಕ್ಕ? ಎಲ್ಲ ಕೆಲಸ ಫೋನ್-ನಲ್ಲೆ ಮಾಡಬಹುದು. ಒಳ್ಳೆ ಸ್ಮಾರ್ಟ್-ಫೋನ್ ಖರೀದಿಸು" ಎಂದ ಸಹೋದರ ಮಹಾಶಯ. ಬೇಡ, ಬೇಡ ವೆಂದರೂ ಸಂಕ್ರಾಂತಿಯಂದು "ಬ್ರಾಂಡ್ ನ್ಯೂ ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 2" ನನ್ನ ಕೈ ಸೇರಿತು.