ದೇಶಜನರ ಮಾತನ್ನು ಆಲಿಸುವುದು ಮುಖ್ಯ, ಬುಲ್ಡೋಜರ್ ಅಡಿಯಲ್ಲಿ ಅವರ ಹಕ್ಕುಗಳನ್ನು ಪುಡಿಮಾಡುವುದಲ್ಲ: ಪ್ರಿಯಾಂಕಾ ಗಾಂಧಿ
ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಅತಿಕ್ರಮಣ ವಿರೋಧಿ ಅಭಿಯಾನದ ಕುರಿತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಸೋಮವಾರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಶಾಂತಿ ಮತ್ತು ವಿಶ್ವಾಸಕ್ಕಾಗಿ ಸಾಮಾನ್ಯ ಜನರ ಮಾತುಗಳನ್ನು ಕೇಳುವುದು ಅಗತ್ಯವಾಗಿದೆ ಮತ್ತು ಅವರ ಹಕ್ಕುಗಳನ್ನು ಬುಲ್ಡೋಜರ್ ಅಡಿಯಲ್ಲಿ ಪುಡಿಮಾಡಬಾರದು ಎಂದು ಹೇಳಿದ್ದಾರೆ.