ಅಗ್ನಿಪಥ

ಬಿಜೆಪಿಯವರು ಎಷ್ಟು ಮಂದಿ ತಮ್ಮ ಮಕ್ಕಳನ್ನು ಅಗ್ನಿಪಥಕ್ಕೆ ಕಳುಹಿಸುತ್ತಿದ್ದಾರೆ?: ಅಖಿಲೇಶ್ ಯಾದವ್ ಪ್ರಶ್ನೆ
ಸೇನಾ ನೇಮಕಾತಿಗಾಗಿ ಅಗ್ನಿಪಥ್ ಯೋಜನೆ ಯುವಕರಿಗೆ ಮಾಡಿದ ಅವಮಾನ ಎಂದು ಸಮಾಜವಾದಿ ಪಕ್ಷದ(ಎಸ್‌ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಹೇಳಿದ್ದಾರೆ.

ಅಗ್ನಿಪಥ್ ನೊಂದಿಗೆ ಬಿಜೆಪಿ ತನ್ನ ಸ್ವಂತ ಸಶಸ್ತ್ರ ಪಡೆ ರಚಿಸಿಕೊಳ್ಳುವ ಪ್ರಯತ್ನ: ಮಮತಾ ಬ್ಯಾನರ್ಜಿ
ಅಗ್ನಿಪಥ್ ಯೋಜನೆ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಸೋಮವಾರ ವಾಗ್ದಾಳಿ ನಡೆಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಹೊಸ ಸೇನಾ ನೇಮಕಾತಿ ಯೋಜನೆ ಮೂಲಕ ಬಿಜೆಪಿ ತನ್ನ ಸ್ವಂತ ಸಶಸ್ತ್ರ ಪಡೆ ರಚಿಸಿಕೊಳ್ಳಲು ಪ್ರಯತ್ನದಲ್ಲಿದೆ ಎಂದು ಆರೋಪಿಸಿದ್ದಾರೆ.

ಹೈರ್ ಅಂಡ್ ಫೈರ್.. ಯೂಸ್ ಅಂಡ್ ಥ್ರೋ; ಅಗ್ನಿಪಥ್ ವಿರೋಧಿಸಿ ಕೇಂದ್ರಕ್ಕೆ ಉದ್ಧವ್ ಠಾಕ್ರೆ ಚಾಟಿ
ಸಶಸ್ತ್ರ ಪಡೆಗಳಿಗೆ ಅಲ್ಪಾವಧಿಯ ನೇಮಕಾತಿ ಯೋಜನೆಯಾದ ಅಗ್ನಿಪಥ್ ಕುರಿತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಇಂದು ಕೇಂದ್ರದ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದರು.

ಅಗ್ನಿಪಥ ವಿರುದ್ಧ ಹಲವು ರಾಜ್ಯಗಳಲ್ಲಿ ಹಿಂಸಾಚಾರ, ಯೋಜನೆ ವಿರುದ್ಧ ಟೀಕೆ: ಪ್ರಯೋಜನ ಕುರಿತು ಕೇಂದ್ರ ಹೇಳಿದ್ದಿಷ್ಟು!
ಸೇನಾ ನೇಮಕಾತಿಯ ಹೊಸ ಯೋಜನೆ ಅಗ್ನಿಪಥ ಕುರಿತು ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಏತನ್ಮಧ್ಯೆ, ಕೇಂದ್ರ ಸರ್ಕಾರ ಸ್ಪಷ್ಟೀಕರಣವನ್ನು ನೀಡಿದ್ದು ಅಗ್ನಿಪಥ ಯೋಜನೆಯ ವಿರುದ್ಧದ ಟೀಕೆಗಳನ್ನು ತಿರಸ್ಕರಿಸಿದೆ.

ಅಗ್ನಿಪಥ ಯೋಜನೆ: ಅಗ್ನಿವೀರರಿಗೆ ಮೂರು ವರ್ಷಗಳ ಪದವಿ ಕೋರ್ಸ್- ಕೇಂದ್ರ ಶಿಕ್ಷಣ ಸಚಿವಾಲಯ
ಕೇಂದ್ರ ಸರ್ಕಾರ ನಿರುದ್ಯೋಗ ಹೋಗಲಾಡಿಸಲು 'ಅಗ್ನಿಪಥ' ಯೋಜನೆಯಡಿ 46 ಸಾವಿರ ಅಗ್ನಿವೀರರನ್ನು 2023ರ ಜುಲೈ ನಿಂದ ನೇಮಿಸಿಕೊಳ್ಳಲಿದೆ. ಇನ್ನು ಮೂರು ತಿಂಗಳಲ್ಲಿ ಈ ಹುದ್ದೆಗೆ ನೇಮಕ ಪ್ರಕ್ರಿಯೆ ಮುಗಿಸುವ ಉದ್ದೇಶ ಹೊಂದಿದೆ ಕೇಂದ್ರ ಸರ್ಕಾರ. ಅತ್ಯಾಕರ್ಷಕ ಸಂಬಳ, ಭತ್ಯೆ, ಸೌಲಭ್ಯಗಳ ಜತೆಗೆ ಪದವಿ ಕೋರ್ಸ್ ನೀಡುವುದಾಗಿ ಘೋಷಣೆ ಮಾಡಿದೆ.

'ಅಗ್ನಿಪಥ್' ಯೋಜನೆ ಟೀಕಿಸಿ ರಾಜನಾಥ್ ಸಿಂಗ್ ಗೆ ವರುಣ್ ಗಾಂಧಿ ಪತ್ರ
ಕೇಂದ್ರ ಸರ್ಕಾರದ ಗುತ್ತಿಗೆ ಆಧಾರದ ಅಲ್ವಾವಧಿಯ ಸೇನಾ ನೇಮಕಾತಿ ಯೋಜನೆ 'ಅಗ್ನಿಪಥದ ವಿವಿಧ ವಿನಾಯಿತಿಗಳನ್ನು ಗುರುವಾರ ಪ್ರಶ್ನಿಸಿರುವ ಬಿಜೆಪಿ ಸಂಸದ ವರುಣ್ ಗಾಂಧಿ, ಇದು ಯುವಕರಲ್ಲಿ ಹೆಚ್ಚಿನ ಅಸಮಾಧಾನವನ್ನು ಹುಟ್ಟುಹಾಕಲಿದ್ದು, ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸುವಂತೆ ಒತ್ತಾಯಿಸಿದ್ದಾರೆ.

