ರಾಜ್ಯಭಾರತದಿಂದ ಅಕ್ಕಿ ರಫ್ತು ಕಡಿತ: ಅಮೆರಿಕದಲ್ಲಿ ತಲ್ಲಣ, ಮಾಲ್ ಗಳಿಗೆ ಮುಗಿಬೀಳುತ್ತಿರುವ ಅನಿವಾಸಿ ಭಾರತೀಯರು, ನಿಜಾಂಶವೇನು?
ಭಾರತವು ಇತ್ತೀಚೆಗೆ ಬಿಳಿ ಅಕ್ಕಿ ರಫ್ತಿನ ಮೇಲೆ ನಿಷೇಧ ಹೇರಿದ್ದು, ಇದು ಅಮೆರಿಕದಲ್ಲಿ ಆತಂಕವನ್ನು ಸೃಷ್ಟಿಸಿದ್ದು, ಅಕ್ಕಿ ಖರೀದಿ ಹಾಗೂ ಸಂಗ್ರಹಣೆಯಲ್ಲಿ ಜನರು ತೊಡಗಿದ್ದಾರೆ. ಅಂತೆಯೇ ಅಕ್ಕಿ ಬೆಲೆ ಕೂಡ ದಿಡೀರ್ ಏರಿಕೆ ಕಂಡಿದ್ದು, ಅಮೆರಿಕದಲ್ಲಿ ಹುಡುಕಿದರೂ ಅಂಗಡಿಗಳಲ್ಲಿ ಅಕ್ಕಿ ಸಿಗುತ್ತಿಲ್ಲವೆಂದು ವರದಿಯಾಗಿದೆ.