ವಿಶೇಷಅಂತಾರಾಷ್ಟ್ರೀಯ ಪ್ಲಾಸ್ಟಿಕ್ ಬ್ಯಾಗ್ ಮುಕ್ತ ದಿನ: ವಿಷಕಾರಿ ಪ್ಲಾಸ್ಟಿಕ್ ಅಥವಾ ಸ್ವಚ್ಛ, ಸುಂದರ ಪರಿಸರ ನಿಮ್ಮ ಆಯ್ಕೆ ಯಾವುದು?
ಪ್ಲಾಸ್ಟಿಕ್, ಪ್ಲಾಸ್ಟಿಕ್, ಪ್ಲಾಸ್ಟಿಕ್. ನಗರ ಹಳ್ಳಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್. ಇಂದು ಜಗತ್ತನ್ನು ಆಳುತ್ತಿರುವುದು ಇದೇ ಪ್ಲಾಸ್ಟಿಕ್. ಮಣ್ಣಲ್ಲಿ ಕೊಳೆಯದ, ನೀರಲ್ಲಿ ಕರಗದ, ಗಾಳಿಯಲ್ಲಿ ಲೀನವಾಗದೇ ಭೂಮಿಯ ಮೇಲೆ ರಾಶಿ ರಾಶಿ ಕಸವಾಗಿ, ಮಾಲಿನ್ಯವಾಗಿ ಪರಿಸರವನ್ನು ಹಾಳುಮಾಡುವ ಇದೇ ಪ್ಲಾಸ್ಟಿಕ್ ಇಂದು ನಮ್ಮನ್ನು ಆಳುತ್ತಿದೆ.