ದೇಶVideo: Anjaneri Waterfall ವೀಕ್ಷಣೆಗೆ ತೆರಳಿ ಅಪಾಯಕ್ಕೆ ಸಿಲುಕಿದ ಪ್ರವಾಸಿಗರು; ಮಾನವ ಸರಪಳಿ ನಿರ್ಮಿಸಿ ರಕ್ಷಣೆ
ಪ್ರವಾಸಿಗರು ನಿಂತಿದ್ದ ಪ್ರದೇಶಕ್ಕೂ ಪ್ರವಾಹದ ನೀರು ನುಗ್ಗಿದ್ದು, ನೋಡ ನೋಡುತ್ತಲೇ ನೀರಿನ ಪ್ರವಾಹ ಹೆಚ್ಚಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖೆ ತಂಡ ಕೂಡಲೇ ಸ್ಥಳಕ್ಕಾಗಮಿಸಿ ತಮ್ಮ ಬುದ್ದಿವಂತಿಕೆ ಬಳಸಿ ಮಾನವ ಸರಪಳಿ ರಚಿಸಿ ಸುಮಾರು 6 ಗಂಟೆಗಳ ಪರಿಶ್ರಮದ ಬಳಿಕ ಎಲ್ಲ ಪ್ರವಾಸಿಗರನ್ನು ರಕ್ಷಿಸಿದ್ದಾರೆ.